Latest

ಆಡಳಿತ ಚುಕ್ಕಾಣಿಯ ಟೆನ್ಶನ್ ಬದಿಗಿಟ್ಟು ಆರ್ ಸಿಬಿ ಮ್ಯಾಚ್ ವೀಕ್ಷಿಸಿದ ಸಿದ್ದರಾಮಯ್ಯ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯುತ್ತಿರುವ ಕಾಂಗ್ರೆಸ್ ನಲ್ಲಿ ಬಹುತೇಕ ಜನ ಫುಲ್ ಟೆನ್ಶನ್ ನಲ್ಲಿದ್ದಾರೆ. ಯಾರಿಗೋ ಡಿಸಿಎಂ ಆಗುವ ಟೆನ್ಶನ್, ಇನ್ನಾರಿಗೋ ಸಚಿವರಾಗುವ ಟೆನ್ಶನ್.. ಎಲ್ಲಾ ಬಿಟ್ಟು ಕೆಲವರಿಗೆ ಗ್ಯಾರಂಟಿ ಹೇಗೆ ಜಾರಿ ಮಾಡುವುದೆಂಬ ಟೆನ್ಶನ್..

ಇವೆಲ್ಲದರ ಮಧ್ಯೆ ರಾಜ್ಯದ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಎಲ್ಲ ಟೆನ್ಶನ್ ಬದಿಗಿಟ್ಟು ಗುರುವಾರ ರಾತ್ರಿ ಆರ್ ಸಿಬಿ ಮ್ಯಾಚ್ ವೀಕ್ಷಣೆ ಮಾಡಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್​ ರೈಸರ್ಸ್​ ಹೈದರಾಬಾದ್​ ನಡುವಿನ ಪಂದ್ಯ ಕೊನೆಯ ಓವರ್ ನೋಡಿದ ಅವರು ಸಿಎಲ್‍ಪಿ ಸಭೆ ಮುಗಿಸಿ ನಿವಾಸಕ್ಕೆ ಹೋದ ಬಳಿಕ ಬೆಂಬಲಿಗರ ಜೊತೆ ಕೆಲಕಾಲ ಐಪಿಎಲ್ ವೀಕ್ಷಿಸಿದ್ದಾರೆ.

ಈ ಕುರಿತ ವಿಡಿಯೊ ಈಗ ವೈರಲ್ ಆಗಿದ್ದು ಅನೇಕ ಜನ ಸಿದ್ದರಾಮಯ್ಯ ಸ್ಥಿತಪ್ರಜ್ಞತೆಗೆ ತಲೆದೂಗಿದ್ದಾರೆ.

Home add -Advt
https://pragati.taskdun.com/siddaramaiah-responded-to-the-criticism-in-a-single-tweet/
https://pragati.taskdun.com/former-gujarat-agriculture-and-housing-minister-vallabhbhai-vaghasia-dies-in-car-accident/
https://pragati.taskdun.com/the-new-parliament-house-will-be-inaugurated-on-may-28/

Related Articles

Back to top button