
ಆಳಂದದಲ್ಲಿ ಮತದಾರರ ಪಟ್ಟಿಯೇ ಡಿಲಿಟ್
ಪ್ರಗತಿವಾಹಿನಿ ಸುದ್ದಿ: ಮತಗಳ್ಳತನದ ಆರೋಪ ಮಾಡಿದ್ದ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಇಂದು ಹೊಸ ಬಾಂಬ್ ಸಿಡಿಸಿದ್ದಾರೆ. ಕರ್ನಾಟಕದ ಆಳಂದದಲ್ಲಿ ಕಳೆದ ಚುನಾವಣೆಯಲ್ಲಿ ಮತಗಳ್ಳತನಾಗಿವೆ. ಕಾಂಗ್ರೆಸ್ ಮತದಾರರನ್ನು ಟಾರ್ಗೆಟ್ ಮಾಡಿ ಮತದಾರರ ಪಟ್ಟಿಯಿಂದಲೇ ಹೆಸರು ಡಿಲಿಟ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದಲ್ಲಿ 2023ರ ಚುನಾವಣೆಯಲ್ಲಿ 6018 ವೋಟ್ ಗಳು ಡಿಲಿಟ್ ಆಗಿವೆ. ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಮತದಾರರ ಹೆಸರುಗಳು ಡಿಲಿಟ್ ಆಗಿದ್ದು, ಮತದಾರರು ವೋಟ್ ಮಾಡಲು ಬೂತ್ ಗೆ ಬಂದಾಗಲೇ ತಮ್ಮ ಹೆಸರು ಡಿಲಿಟ್ ಆಗಿರುವುದು ಗೊತ್ತಾಗಿದೆ. ಮತದಾರರಿಗೆ ಮಾಹಿತಿಯನ್ನೂ ನಿಡದೇ ಡಿಲಿಟ್ ಮಾಡಲಾಗಿದೆ.
ಕಾಂಗ್ರೆಸ್ ಮತದಾರರನ್ನು ಟಾರ್ಗೆಟ್ ಮಾಡಿ ಅವರ ಹೆಸರನ್ನು ಮಾತ್ರ ಡಿಲಿಟ್ ಮಾಡಿರುವುದು ಬೆಳಕಿಗೆ ಬಂದಿದೆ. ಬೂತ್ ನಂ 37ರಲ್ಲಿ ಗೋದಾಬಾಯ್ ಅವರ ಹೆಸರು ಡಿಲಿಟ್ ಮಾಡಲಾಗಿದೆ. ಗೋದಾಬಾಯ್ ಹೆಸರಲ್ಲಿ 12 ನಕಲಿ ಮಾತದಾನಗಳು ನಡೆದಿವೆ. ಬೇರೆ ಬೇರೆ ರಾಜ್ಯಗಳಿಂದ ಬಂದು ಮತದಾನ ಮಾಡಿದ್ದಾರೆ. ಸೂರ್ಯಕಾಂತ್ ಅವರ ಹೆಸರನ್ನೂ ತೆಗೆದುಹಾಕಲಾಗಿದೆ. ಸೂರ್ಯಕಾಂತ್ ಹೆಸರಿನ ಮೇಲೆ 12 ಜನರ ಹೆಸರು ಡಿಲಿಟ್ ಆಗಿದೆ. ಬಬಿತಾ ಅವರ ಹೆಸರೂ ಮತದಾನದ ಪಟ್ಟಿಯಿಂದ ಡಿಲಿಟ್ ಆಗಿದೆ ಎಂದು ಆರೋಪಿಸಿದರು.
ಈ ರೀತಿ ಮತಗಳ್ಳತನ ನಡೆದಿದ್ದು, ನಕಲಿ ಮತದಾನ ರಾಜಾರೋಷವಾಗಿ ನಡೆದಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಹಲವು ಬಾರಿ ಪತ್ರ ಬರೆದರೂ ಯಾವುದೇ ಉತ್ತರ ಬಂದಿಲ್ಲ. ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ಮತಗಳ್ಳರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.