ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ‘ರಕ್ತ’ ತಯಾರಿಸಲಾಗದ ವಸ್ತು. ಇದರಲ್ಲಿ ವ್ಯಕ್ತಿಯೊಬ್ಬನಜೀವ ಉಳಿಸುವಂತಹ ಶಕ್ತಿ ಅಡಗಿದ್ದು ಸಾವನ್ನೇಗೆಲ್ಲುವಂತಹ ದಿವ್ಯೌಷಧಿ ನಮ್ಮದೇಹದಲ್ಲೇ ಲಭ್ಯವಿದೆ, ಆದ್ದರಿಂದ ‘ರಕ್ತದಾನ’ ಶಿಬಿರಗಳಲ್ಲಿ ಯುವಜನಾಂಗ ಹೆಚ್ಚಾಗಿ ಯಾವುದೇ ಅಳುಕಿಲ್ಲದೇ ಪಾಲ್ಗೊಳ್ಳಬೇಕು ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಕರೆ ನೀಡಿದ್ದಾರೆ.
ನಗರದ ಕೆಪಿಟಿಸಿಎಲ್ ಸಭಾಭವನದಲ್ಲಿ ಅಭಿಮಾನಿಗಳು ಆಯೋಜಿಸಿದ್ದ ತಮ್ಮ 24ನೇ ಹುಟ್ಟು ಹಬ್ಬದ ಸಂಭ್ರಮಾಚರಣೆ ನಿಮಿತ್ತ ರಕ್ತದಾನ ಶಿಬಿರದಲ್ಲಿ ಮಾತನಾಡಿ, ನಾವೆಲ್ಲರು ಒಂದೆ, ನಮ್ಮೆಲ್ಲರ ನರಗಳಲ್ಲಿ ಹರಿಯುತ್ತಿರುವ ರಕ್ತವು ಒಂದೆ. ಹೀಗಿರುವಾಗ ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ಸ್ವಯಂ ಪ್ರೇರಿತನಾಗಿ ರಕ್ತದಾನ ಮಾಡಿದರೆ, ಮಾನವೀಯ ಸಮಾಜ ಕಾಣಲು ಸಾಧ್ಯ ಎಂದು ತಿಳಿ ಹೇಳಿದರು.
‘ರಕ್ತ’ ವೆಂಬ ವಸ್ತುವೇ ವೈದ್ಯಕೀಯ ಲೋಕಕ್ಕೆ ಸವಾಲಾಗಿ ಪರಿಣಮಿಸಿದೆ, ಆರೋಗ್ಯವಂತಯುವಕರರಕ್ತವು ಬಹಳಷ್ಟು ಜನರಿಗೆಉಪಕಾರಿಯಾಗಲಿದೆ, ಇತ್ತೀಚಿನ ದಿನಗಳಲ್ಲಿ ದುಶ್ಚಟಗಳ ದಾಸರಾಗುತ್ತಿರುವಯುವಕರು ವಿವಿಧ ರೋಗಗಳು ಅಂಟಿ ಕೊಂಡು ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ಇದರಿಂದ ಬಹಳಷ್ಟು ಜನರಿಗೆ ಅನುಕೂಲವಾಗಬೇಕಾಗಿದ್ದ ರಕ್ತವು ವೃಥಾ ವ್ಯರ್ಥವಾಗುತ್ತಿದೆ. ರಕ್ತದಾನದಿಂದ ಕೊಟ್ಟಂತಹರಕ್ತ ಬೇರೊಬ್ಬರ ಜೀವರಕ್ಷಿಸಲಿದೆ ಹೀಗಾಗಿ ರಕ್ತ ನೀಡುವ ದಾನಿಗಳನ್ನು ದೇವರ ಸಮಾನವೆಂದು ಪರಿಗಣಿಸಲಾಗುತ್ತಿದೆ. ಆರೋಗ್ಯವಂತ ಮನುಷ್ಯ ವರ್ಷಕ್ಕೆರಡು ಬಾರಿಯಾದರೂ ರಕ್ತದಾನ ಮಾಡಲು ಮುಂದಾಗುವುದು ಸೂಕ್ತ ಎಂದರು.
ಇದಕ್ಕೂ ಮೊದಲು ಈ ರಕ್ತದಾನ ಶಿಬಿರದಲ್ಲಿ ಅನೇಕ ಸಂಖ್ಯೆಯಲ್ಲಿ ಯುವಕರು ರಕ್ತ ದಾನ ಮಾಡಿದರು. ಈ ವೇಳೆ ಮಾಜಿ ಶಾಸಕ ರಮೇಶ ಕುಡಚಿ, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಜಿಪಂ ಮಾಜಿ ಸದಸ್ಯರಾದ ಸಿದ್ದು ಸುಣಗಾರ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆಪ್ತ ಸಹಾಯಕ ಮಲಗೌಡಾ ಪಾಟೀಲ, ಜಿಲ್ಲಾ ಗ್ರಾಮೀಣ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಕಲ್ಪನಾ ಜೋಶಿ, ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ ಎಂ. ಜೆ, ಸುನೀಲ ಹನುಮಣ್ಣವರ, ಅರುಣ ಕಟಾಂಬಳೆ, ಪಾಲಿಕೆ ಮಾಜಿ ಸದಸ್ಯೆ ಸರಳಾ ಹಿರೇಕರ, . ವಿಜಯ ತಳವಾರ, ಅನಂತ ಬ್ಯಾಕೂಡ್ ಹಾಗೂ ಸಮಸ್ತ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಜಾರಕಿಹೊಳಿ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.
ರಾಹುಲ್ ಜಾರಕಿಹೊಳಿ ಭವಿಷ್ಯದ ಆಶಾಕಿರಣವಾಗಲಿ; ಶ್ರೀ ಪ್ರಭುಚನ್ನಬಸವ ಮಹಾಸ್ವಾಮೀಜಿ ಹಾರೈಕೆ
https://pragati.taskdun.com/politics/rahul-jarakiholibirthdayprabhu-channabasava-mahaswamiji/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ