ಪ್ರಗತಿವಾಹಿನಿ ಸುದ್ದಿ; ರಾಯಚೂರು: ನೀರಾವರಿ ಲಾಖೆಯ ನಾಲ್ವರು ಎಂಜಿನಿಯರ್ ಗಳು ಲೋಕಾಯುಕ್ತರ ಬಲೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆನಾರೋಗ್ಯ ಎಂದು ಸುಳ್ಳು ಹೇಳಿ ಆಸ್ಪತ್ರೆಗೆ ದಾಖಲಾಗಿದ್ದ ಎಂಜಿನಿಯರ್ ಗಳ ಕಳ್ಳಾಟವನ್ನು ರಿಮ್ಸ್ ವೈದ್ಯರು ಪತ್ತೆ ಮಾಡಿದ್ದಾರೆ.
ಲಂಚಕ್ಕೆ ಕೈಯೊಡ್ಡುವಾಗ ಲೋಕಾಯುಕ್ತರ ಕೈಗೆ ಸಿಕ್ಕಿ ಬಿದ್ದಿದ್ದ ನಾಲ್ವರ ಎಂಜಿನಿಯರ್ ಗಳ ಪೈಕಿ ಇಬ್ಬರು ತೀವ್ರ ಎದೆನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಎಸ್ ಇ ಸೂರ್ಯಕಾಂತ್, ಎಇಇ ನರಸಿಂಹರಾವ್ ದೇಶಪಾಂಡೆ, ಎಇಗಳಾದ ಭಾವನಾ, ತುಕಾರಾಂ ಎಂಬುವವರನ್ನು ಲೋಕಾಯುಕ್ತರು ಬಂಧಿಸಿದ್ದರು. ಅವರಲ್ಲಿ ತುಕಾರಾಂ ಹಾಗೂ ಭಾವನಾ ಅನಾರೋಗ್ಯದ ನಾಟಕವಾಡಿ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.
ಈಗ ರಿಮ್ಸ್ ಆಸ್ಪತ್ರೆ ವೈದ್ಯರು ಎಂಜಿನಿಯರ್ ಗಳ ನಾಟಕ ಬಯಲು ಮಾಡಿದ್ದಾರೆ. ಯಾವುದೇ ಆರೋಗ್ಯ ಸಮಸ್ಯೆಯಿಲ್ಲದಿದ್ದರೂ ಎದೆ ನೋವು ಎಂದು ಆಸ್ಪತ್ರೆಗೆ ದಾಖಗಾದ್ದಾರೆ. ಪರೀಕ್ಷೆ ನಡೆಸಿದಾಗ ಯಾವುದೇ ಸಮಸ್ಯೆಯಿಲ್ಲ ಎಂಬುದು ದೃಢಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕಾಂಟ್ರಾಕ್ಟರ್ ಈಶ್ವರಯ್ಯ ಅವರಿಗೆ ಬಿಲ್ ಮಾಡಿಕೊಡಲು ಪ್ರತಿದಿನ ಈ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದರು. ಟೇಬಲ್ ಪ್ರಕಾರ ಲಂಚ ನೀಡುವಂತೆ ಒತ್ತಾಯಿಸಿದ್ದರು. ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ಗಳ ಬಿಲ್ ಬಾಕಿ ಉಳಿಸಿಕೊಂಡಿದ್ದರು. ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಅಮ್ತಿಮವಾಗಿ ಈಶ್ವರಯ್ಯ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇದೀಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಎಂಜಿನಿಯರ್ ಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹೊಸ ವಿವಾದದ ಸುಳಿಯಲ್ಲಿ ಕಾಂತಾರಾ ಸಿನಿಮಾ: ಸಿನಿಮಾ ಪ್ರಕದರ್ಶನಕ್ಕೆ ತಡೆ ನೀಡುವಂತೆ ಡಿಸಿಗೆ ಮನವಿ
https://pragati.taskdun.com/%e0%b2%b0%e0%b2%be%e0%b2%9c%e0%b3%8d%e0%b2%af/kaantara-filmnew-issuedalita-sanghatanemdaivanartakaru/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ