
ಪ್ರಗತಿವಾಹಿನಿ ಸುದ್ದಿ; ರಾಯಚೂರು: ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಅಂಗಡಿಗೆ ಕರೆದೊಯ್ದು ಅತ್ಯಾಚರಗೈದು ಪರಾರಿಯಾಗಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
50 ವರ್ಷದ ಅರುಣ್‍ಕುಮಾರ್ ಠಾಕೂರ್ ಬಂಧಿತ ಆರೋಪಿ. ಈತ ಸ್ಟೇಷನರಿ ಅಂಗಡಿ ವ್ಯಾಪಾರಿಯಾಗಿದ್ದನು. ಫೆಬ್ರವರಿ 25 ರಂದು ಶಾಲೆಗೆ ಹೋಗಿದ್ದ ಇಬ್ಬರು ಅಪ್ರಾಪ್ತ ಬಾಲಕಿಯರು ಮನೆಗೆ ಊಟಕ್ಕೆ ಹೋಗುತ್ತಿದ್ದರು. ಈ ವೇಳೆ ಆರೋಪಿ ಠಾಕೂರ್ ಅಂಗಡಿಯೊಳಗೆ ಅವರಿಬ್ಬರನ್ನು ಕರೆದು ಅತ್ಯಾಚಾರ ಎಸಗಿದ್ದ.
ಬಳಿಕ ವಿಷಯ ಯಾರಿಗೂ ಹೇಳದಂತೆ ಬೆದರಿಸಿ ಕಳುಹಿಸಿದ್ದ. ಘಟನೆ ಬಳಿಕ ಆರೋಪಿ ಠಾಕೂರ್ ಪರಾರಿಯಾಗಿದ್ದ. ಹೀಗೆ ಪರಾರಿಯಾಗಿದ್ದ ಆರೋಪಿ ವೇಷಬದಲಿಸಿಕೊಂಡು ತಿರುಗುತ್ತಿದ್ದ.
ಘಟನೆ ಕುರಿತು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದು, 50 ವರ್ಷದ ಕಾಮುಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ