Belagavi NewsBelgaum NewsKannada NewsKarnataka News

*ಎರಡು ದಿನಗಳ ಬಳಿಕ ಮಳೆ ತಗ್ಗುವ ಸಾದ್ಯತೆ: ಹವಾಮಾನ ಇಲಾಖೆ*

ಪ್ರಗತಿವಾಹಿನಿ ಸುದ್ದಿ: ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮಳೆ ಆರ್ಭಟ ಜಾಸ್ತಿಯಾಗಿದೆ. ಮುಂದಿನ ಎರಡು-ಮೂರು ದಿನ ಭಾರೀ ಮಳೆಯ ಮುನ್ಸೂಚನೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಳಿಕ ಮಳೆ ಪ್ರಮಾಣ ತಗ್ಗುವ ಸಾಧ್ಯತೆ ಇದೆ.

ಕರಾವಳಿ ಕರ್ನಾಟಕ ಮತ್ತು ಪಕ್ಕದ ಪಶ್ಚಿಮ ಘಟ್ಟಗಳ ಜಿಲ್ಲೆಗಳಲ್ಲಿ ನಿರಂತರ ಗಾಳಿಯ ವೇಗವು 40-50 ಕಿ.ಮೀ ತಲುಪುವ ಸಾಧ್ಯತೆ ಇದೆ. ಹಾಗಾಗಿ ಭಾರೀ ಮಳೆಯಾಗುವ ಸಾಧ್ಯತೆ ಹೆಚ್ಚಿದೆ.

ಇಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಂಭವವಿದೆ ಮತ್ತು ಬೆಂಗಳೂರಿನಲ್ಲಿ ಮೋಡ ಕವಿದ ವಾತವರಣ ಮುಂದುವರಿಯಲಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ ಮಾಹಿತಿ:

ದಾವಣಗೆರೆ: 27-22

ಹುಬ್ಬಳ್ಳಿ :26-21

ಬೆಂಗಳೂರು :28-21

ಮಂಗಳೂರು :28-25

ಶಿವಮೋಗ್ಗ :26-22

ಬೆಳಗಾವಿ :24-21

ರಾಯಚೂರು :31-24

ಯಾದಗಿರಿ :31-24

ವಿಜಯಪುರ :27-22

ಬೀದರ :27-22

ಕಲಬುರಗಿ: 29-23

ಬಾಗಲಕೋಟೆ: 29-23

ಚಾಮರಾಜನಗರ: 29-22

ಚಿಕ್ಕಬಳ್ಳಾಪುರ: 28-21

ಕೊಲಾರ:29-22

ತುಮಕೂರು: 28-21

ಉಡುಪಿ :28-25

ಮೈಸೂರು: 28-21

ಮಂಡ್ಯ :29-22

ಮಡಿಕೇರಿ: 21-17

ರಾಮನಗರ: 29-22

ಹಾಸನ :24-19

ಕಾರವಾರ: 28-26

ಚಿಕ್ಕಮಗಳೂರು: 23-19

ಚಿತ್ರದುರ್ಗ 23: 27-21

ಹಾವೇರಿ :27-22

ಬಳ್ಳಾರಿ :31-24

ಗದಗ :27-22

ಕೊಪ್ಪಳ :29-22

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button