Latest

60 ಬಾರಿ ಚಾಕುವಿನಿಂದ ಇರಿದ ದುಷ್ಕರ್ಮಿಗಳು; ಚಂದ್ರಶೇಖರ್ ಗುರೂಜಿ ಹತ್ಯೆಯ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ವಾಸ್ತು ತಜ್ಞ, ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಯವರನ್ನು ದುಷ್ಕರ್ಮಿಗಳು ಹತ್ಯೆಗೈದ ಭೀಕರ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದ್ದು, ಹಂತಕರು ಮನ ಬಂದಂತೆ ಚಾಕುವಿನಿಂದ ಇರಿಯುತ್ತಿರುವ ದೃಶ್ಯ ನಡುಕ ಹುಟ್ಟಿಸುವಂತಿದೆ.

ಗ್ರಾಹಕರನ್ನು ಭೇಟಿಯಾಗಲೆಂದೇ ಹುಬ್ಬಳ್ಳಿಯ ಉಣಕಲ್ ಬಳಿಯ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದ ಗುರೂಜಿಯವರನ್ನು ಇಂದು ಮಧ್ಯಾಹ್ನ 12:30ರ ಸುಮಾರಿಗೆ ಭಕ್ತರ ನೆಪದಲ್ಲಿ ಹೋಟೆಲ್ ರಿಸೆಪ್ಶನ್ ಗೆ ದುಷ್ಕರ್ಮಿಗಳು ಕರೆಸಿಕೊಂಡಿದ್ದಾರೆ.

ಹೋಟೆಲ್ ರೂಮಿನಿಂದ ಕೆಳಗೆ ಬಂದ ಚಂದ್ರಶೇಖರ್ ಗುರೂಜಿ ಲಾಂಜ್ ನಲ್ಲಿ ಕುಳಿತಿದ್ದರು. ಈ ವೇಳೆ ಓರ್ವ ದುಷ್ಕರ್ಮಿ ಗುರೂಜಿಯವರಿಗೆ ನಮಸ್ಕರಿಸುವ ನೆಪದಲ್ಲಿ ಕಾಲಿಗೆ ಬೀಳುತ್ತಾನೆ. ಇನ್ನೋರ್ವ ದುಷ್ಕರ್ಮಿ ಗುರೂಜಿಯವರಿಗೆ ಚಾಕುವಿನಿಂದ ಇರಿದಿದ್ದಾನೆ.

ಗುರೂಜಿ ನೆಲಕ್ಕೆ ಬಿದ್ದು ನರಳಾಡುತ್ತಿದ್ದರೂ ಬಿಡದ ದುಷ್ಕರ್ಮಿ ಚಾಕುವಿನಿಂದ 60ಕ್ಕೂ ಹೆಚ್ಚು ಬಾರಿ ಮನಬಂದಂತೆ ಇರಿದಿದ್ದಾನೆ. ಕೃತ್ಯದ ಬಳಿಕ ದುಷ್ಕರ್ಮಿಗಳಿಬ್ಬರೂ ಹೋಟೆಲ್ ನಿಂದ ಪರಾರಿಯಾಗಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪರಿಚಿತರಿಂದಲೇ ಗುರೂಜಿ ಹತ್ಯೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಹುಬ್ಬಳ್ಳಿ : ಖ್ಯಾತ ವಾಸ್ತು ತಜ್ಞ, ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಬರ್ಬರ ಹತ್ಯೆ

Home add -Advt

Related Articles

Back to top button