https://youtu.be/q3r-Pj1A5pU
https://youtu.be/v7UXX2BNkG4
https://youtu.be/jEKZlb-h0GY
https://youtu.be/erLqu2S_W8g
https://youtu.be/hOKbSIu4hfI
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಜಿಲ್ಲೆಯ ಹಲವೆಡೆ ಭಾನುವಾರ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಹಲವು ವಾಹನಗಳು ಕೊಚ್ಚಿ ಹೋಗಿವೆ. ಖಾನಾಪುರದಲ್ಲಿ ಮನೆ ಕುಸಿದು ವೃದ್ದ ಸಾವಿಗೀಡಾಗಿದ್ದಾನೆ.
ಖಾನಾಪೂರ ತಾಲೂಕಿನ ಕಸಮಳಗಿ ಗ್ರಾಮದಲ್ಲಿ ಧಾರಾಕಾರ ಮಳೆಗೆ ಮನೆಯೊಂದು ಕುಸಿದಿದೆ. ಮನೆಯೊಳಗಿದ್ದ ವೃದ್ಧ ಲಿಯಾಕತ್ ಮಕಾನದಾರ(೫೫) ಮೇಲೆ ಗೋಡೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ.
ಘಟನಾ ಸ್ಥಳಕ್ಕೆ ನಂದಗಡ ಪಿಎಸ್ ಐ ಸುಮಾ ನಾಯಕ ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಕರಣ ಧಾಖಲಿಸಿದ್ದಾರೆ. ಮೃತರ ಪಾರ್ಥೀವ ಶರೀರವನ್ನು ಖಾನಾಪೂರ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು ತಹಸೀಲದಾರ ಶಿವಾನಂದ ಉಳ್ಳಗಡ್ಡಿ ಭೇಟಿ ನೀಡಿ ಮುಂದಿನ ಕ್ರಮಕ್ಕೆ ಆದೇಶಿಸಿದ್ದಾರೆ.
ಸಂಕೇಶ್ವರದಲ್ಲಿ ಧಾರಾಕಾರ ಮಳೆಗೆ ನಿಲ್ಲಿಸಿದ್ದ ಹಲವು ವಾಹನಗಳು ತೇಲಿ ಹೋಗಿವೆ. ಹಲವು ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳೆಲ್ಲ ಜಲಾವೃತವಾಗಿ, ಸಂಚಾರ ಅಸ್ತವ್ಯಸ್ತವಾಗಿದೆ.
ರಾಮದುರ್ಗದ ಚಿಕ್ಕಹಂಪಿಹೊಳಿ, ಹಿರೇಹಂಪಿಹೊಳಿ ಸೇರಿದಂತೆ ಹಲವು ಹಳ್ಳಿಗಳು ಪ್ರವಾಹಕ್ಕೆ ತತ್ತರಿಸಿವೆ.
ಬೆಳಗಾವಿ ನಗರದಲ್ಲೂ ಭಾರಿ ಮಳೆಗೆ ಹಲವು ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ಥವಾಗಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ವಂಟಮೂರಿ ಬಳಿ ನಿರು ತುಂಬಿ ಕೆಲವು ಸಮಯ ಸಂಚಾರ ಸ್ಥಗಿತಗೊಳಿಸಲಾಗಿತ್ತು. ವಾಹನಗಳ ಕಿಲೋಮೀಟರ್ ವರೆಗೆ ಸಾಲು ಹಚ್ಚಿ ನಿಂತಿದ್ದವು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ