Kannada NewsLatest

ಮಂಟೂರ ಬಯೋಡೀಸಲ್ ಘಟಕದ ಮೇಲೆ ತಹಸಿಲ್ದಾರ ದಾಳಿ

ಪ್ರಗತಿವಾಹಿನಿ ಸುದ್ದಿ; ರಾಯಬಾಗ: ಮಂಟೂರ್ ಗ್ರಾಮದಲ್ಲಿ ಅನಧಿಕೃತವಾಗಿ ಬಯೋ ಡೀಸೆಲ್ ಮಾರಾಟ ಮಾಡುತ್ತಿದ್ದ ಘಟಕದ ಮೇಲೆ ದಿಡೀರ್ ದಾಳಿ ಮಾಡಿದ ತಹಸಿಲ್ದಾರ್ ಆರ್ ಎಚ್ ಭಾಗವಾನ್ ಅವರು,ಅಕ್ರಮವಾಗಿ ಘಟಕ ಸ್ಥಾಪಿಸಿ ಇಂಧನ ಮಾರಾಟ ಮಾಡುತ್ತಿದ್ದ ಶಿವಾಜಿ ಸಿದ್ದಪ್ಪ ತುಕ್ಕಾನಟ್ಟಿ ಎಂಬವರನ್ನು ವಶಕ್ಕೆ ಪಡೆದು ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇಂಧನ ಮಾರಾಟ ಮಾಡಲು ಉಪಯೋಗಿಸುತ್ತಿದ್ದ ಕ್ಯಾನ್, ಪ್ಲಾಸ್ಟಿಕ್ ಡ್ರಮ್,500 ಲೆಟರ್ ಅಷ್ಟು ಬಯೋಡೀಸೆಲ್, ಇಂಧನ ಬಿಡುವ ಪೆಟ್ಟಿಗೆಯನ್ನು ದಾಳಿಯ ವೇಳೆ ವಶಪಡಿಸಿಕೊಳ್ಳಲಾಗಿದೆ ತಾಲೂಕಿನಲ್ಲಿ ಇನ್ನೂ ಹಲವಾರು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಬಯೋಡೀಸೆಲ್ ಘಟಕಗಳು ಇವೆ ಅವುಗಳನ್ನು ಪತ್ತೆ ಹಚ್ಚಿ ಅವುಗಳ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ತಹಶೀಲ್ದಾರ್ ಆರ್ ಎಚ್ ಭಾಗವಾನ್ ತಿಳಿಸಿದ್ದಾರೆ.

ಆರೋಪಿಯ ಮೇಲೆ ಅಗತ್ಯ ವಸ್ತುಗಳ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದಾರೆ ವಶಕ್ಕೆ ಪಡೆದುಕೊಂಡಿದ್ದು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿ ಪೊಲೀಸ್ ಠಾಣೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ದಾಳಿಯಲ್ಲಿ ತಹಸಿಲ್ದಾರ್ ಆರ್ ಎಚ್ ಭಾಗವಾನ್, ಆಹಾರ ವೃತ್ತ ನಿರೀಕ್ಷಕ ಶ್ರೀಶೈಲ ರಾಯ್ಕರ್, ಸಿಪಿಐ ಎಚ್ ಡಿ ಮುಲ್ಲಾ, ಸೇರಿದಂತೆ ಸಿಬ್ಬಂದಿ ಇದ್ದರು.
ಅಥಣಿ ತಾಲೂಕಿನ ಅಕ್ರಮ ಮರಳುಗಾರಿಕೆಗೆ ತಡೆ ಯಾವಾಗ ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button