
ಪ್ರಗತಿವಾಹಿನಿ ಸುದ್ದಿ: ಟಾಲಿವುಡ್ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ವಿರುದ್ಧ ಅವರ ಸ್ನೇಹಿತನೇ ಗಂಭೀರ ಆರೋಪ ಮಾಡಿದ್ದಾರೆ. ರಾಜಮೌಳಿ ಅವರ ಹಳೆಯ ಸ್ನೇಹಿತ ರಾಜಮೌಳಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಮಾಡಿದ್ದಾರೆ.
ಶ್ರೀನಿವಾಸ್ ರಾವ್ ಎಂಬುವವರು ರಾಜಮೌಳಿ ಆಪ್ತ ಸ್ನೇಹಿತರಾಗಿದ್ದರು. ಇದೀಗ ಅವರು ತನ್ನ ಸಾವಿಗೆ ರಾಜಮೌಳಿಯೇ ಕಾರಣ. ಆತ್ಮಹತ್ಯೆಗೆ ಪ್ರೇರಣೆ ನೀಡಿದ್ದಾರೆ ಎಂದು ವಿಡಿಯೋ ಮಾಡಿಟ್ಟು, ಲೆಟರ್ ಬರೆದಿಟ್ಟು ನಾಪತ್ತೆಯಾಗಿದ್ದಾರೆ.
ಶ್ರೀನಿವಾಸ್ ರಾವ್ ರಾಜಮೌಳಿ ನಿರ್ದೇಶನದ ಜ್ಯೂ.ಎನ್ ಟಿ ಆರ್ ಅಭಿನಯದ ‘ಯಮದೊಂಗ’ ಸಿನಿಮಾ ನಿರ್ಮಾಪಕರೂ ಆಗಿದ್ದಾರೆ. ರಾಜಮೌಳಿ ತಮಗೆ ನೀಡಿದ ಹಿಂಸೆಯಿಂದಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ರಾಜಮೌಳಿ ಹಾಗೂ ಅವರ ಪತ್ನಿ ರಮಾ ಕಾರಣ ಎಂದು ವಿಡಿಯೋ ಮಾಡಿಟ್ಟು ಅದನ್ನು ಸ್ನೇಹಿತರಿಗೆ ಕಳುಹಿಸಿ ನಾಪತ್ತೆಯಾಗಿದ್ದಾರೆ.
ಇನ್ನು ಶ್ರೀನಿವಾಸ್ ರಾವ್, ರಾಜಮೌಳಿ ಹಾಗೂ ತಾನು ತುಂಬಾ ವರ್ಷಗಳ ಹಳೇ ಸ್ನೇಹಿತರು. ನಾವಿಬ್ಬರೂ ಒಂದೇ ಯುವತಿಯನ್ನು ಪ್ರೀತಿಸುತ್ತಿದ್ದೆವು. ಈ ವೇಳೆ ರಾಜಮೌಳಿ ತನಗೆ ತ್ಯಾಗ ಮಾಡು ಅಂದ. ನಾನು ಹಾಗೆ ಮಾಡಿದ್ದೇನೆ. ಆ ಬಳಿಕ ನಾನು ಯಾರನ್ನೂ ಮದುವೆಯಾಗಿಲ್ಲ. ಇನ್ನು ಕೆಲ ತಿಂಗಳ ಹಿಂದೆ ನನ್ನ ಹಾಗೂ ರಾಜಮೌಳಿ ನಡುವೆ ಸ್ವಲ್ಪ ಮಾತಿನ ಚಕಮಕಿ ನಡೆದಿತ್ತು. ಆಗ ನಾನು ನಮ್ಮಿಬ್ಬರ ಟ್ರಯಾಂಗಲ್ ಲವ್ ಸ್ಟೋರಿಯನ್ನು ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದೆ. ಆಗ ಆತನಿಗೆ ಭಯ ಹುಟ್ಟಿದೆ. ನಮ್ಮ ಕಥೆಯನ್ನು ಎಲ್ಲರಿಗೂ ಹೇಳಿ, ಸಿನಿಮಾ ಮಾಡುತ್ತಾನೆ ಎಂಬ ಕಾರಣಕ್ಕೆ ನನಗೆ ಚಿತ್ರಹಿಂಸೆ ನೀಡಿದ್ದಾರೆ. ರಾಜಮೌಳಿ ಮಕ್ಕಳು ನನಗೆ ಆಪ್ತರಾಗಿದ್ದವರು ಇದ್ದಕ್ಕಿದ್ದಂತೆ ದೂರಾದರು. ನಾನು ಒಂಟಿಯಾದೆ ಎಂದಿದ್ದಾರೆ.
ನಾನಂತು ಸಾಯುತ್ತಿದ್ದೇನೆ. ರಾಜಮೌಳಿ ವಿರುದ್ಧ ಸ್ವಯಂಪ್ರೇರಿತವಾಗಿ ಸುಮೋಟೊ ಕೇಸ್ ದಾಖಲಿಸಿಕೊಂಡು ಲೈ ಡಿಟೆಕ್ಟರ್ ಬಳಸಿ ವಿಚಾರಣೆ ನಡೆಸಿದರೆ ಎಲ್ಲವೂ ಹೊರಬರುತ್ತೆ ಎಂದು ವಿಡಿಯೋದಲ್ಲಿ ಹೇಳಿ ನಾಪತ್ತೆಯಾಗಿದ್ದಾರೆ. ಒಟ್ಟಾರೆ ಪ್ರಕರಣದ ಬಗ್ಗೆ ರಾಜಮೌಳಿ ವಿರುದ್ಧ ಕೇಸ್ ದಾಖಲಾಗುವ ಸಾಧ್ಯತೆ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ