Latest

ಡಿಎಸ್ ಪಿ ಹಾಗೂ ಮಹಿಳಾ ಕಾನ್ಸ್ ಟೇಬಲ್ ರಾಸಲೀಲೆ ಪ್ರಕರಣ; ಸೇವೆಯಿಂದ ವಜಾಗೊಳಿಸಿ ಆದೇಶ

ಪ್ರಗತಿವಾಹಿನಿ ಸುದ್ದಿ; ಜೈಪುರ: ಡಿಎಸ್ ಪಿ ಹಾಗೂ ಮಹಿಳಾ ಕಾನ್ಸ್ ಟೇಬಲ್ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಡಿಎಸ್ ಪಿ ಹೀರಾ ಲಾಲ್ ಸೈನಿ ಹಾಗೂ ಮಹಿಳಾ ಪೇದೆ ಇಬ್ಬರನ್ನು ಕರ್ತವ್ಯದಿಂದ ವಜಾಗೊಳಿಸಿ ರಾಜಸ್ಥಾನ ಸರ್ಕಾರ ಆದೇಶ ಹೊರಡಿಸಿದೆ.

ಡಿಎಸ್ ಪಿ ಹಾಗೂ ಮಹಿಳಾ ಕಾನ್ಸ್ ಟೇಬಲ್ ಇಬ್ಬರ ಅಶ್ಲೀಲ ವಿಡಿಯೋ ಗಳು ವೈರಲ್ ಆಗಿತ್ತು. ಅಲ್ಲದೇ ಅಪ್ರಾಪ್ತ ಪುತ್ರನ ಎದುರೇ ರಾಸಲೀಲೆಯಲ್ಲಿ ತೊಡಗಿರುವುದು ಸಾಬೀತಾಗಿತ್ತು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಡಿಎಸ್ ಪಿ ಹಿರಾ ಲಾಲ್ ಸೈನಿ ಹಾಗೂ ಮಹಿಳಾ ಕಾನ್ಸ್ ಟೇಬಲ್ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಇದೀಗ ರಾಜಸ್ಥಾನ ಸರ್ಕಾರ ಡಿಎಸ್ ಪಿ ಹಾಗೂ ಮಹಿಳಾ ಪೊಲೀಸ್ ಪೇದೆ ಇಬ್ಬರನ್ನು ಸೇವೆಯಿಂದ ವಜಾಗೊಳಿಸಿ ಆದೇಶ ನೀಡಿದೆ. ಈ ನಡುವೆ ಮಹಿಳಾ ಪೊಲೀಸ್ ಪೇದೆ ಪತಿ ಇಬ್ಬರು ಆರೋಪಿಗಳ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ರಾಸಲೀಲೆ ಪ್ರಕರಣದ ವಿಡಿಯೋ ವೈರಲ್ ಆಗುತ್ತಿದ್ದಂತೆ ರಾಜಸ್ಥಾನ ಪೊಲೀಸರು ಡಿಎಸ್ ಪಿ ಹೀರಾ ಲಾಲ್ ಸೈನಿಯನ್ನು ಸೆ.9ರಂದು ಬಂಧಿಸಿದ್ದರು. ಮಹಿಳಾ ಪೊಲೀಸ್ ಪೇದೆಯನ್ನು ಜೈಪುರದಲ್ಲಿ ಸೆ.12ರಂದು ಬಂಧಿಸಲಾಗಿತ್ತು.

ಇಬ್ಬರು ಆರೋಪಿಗಳು ರಾಜಸ್ಥಾನ ಅಜ್ಮೀರ್ ಜಿಲ್ಲೆಯ ಪುಷ್ಕರ್ ಪಟ್ಟಣದ ರೆಸಾರ್ಟ್ ಒಂದಲ್ಲಿ ಅಪ್ರಾಪ್ತ ಮಗನ ಮುಂದೆಯೇ ರಾಸಲೀಲೆಯಲ್ಲಿ ತೊಡಗಿದ್ದ ವಿಡಿಯೋ ವೈರಲ್ ಆಗಿತ್ತು.
ಕೈ ಕಟ್ಟಿ ರೈಲ್ವೆ ಟ್ರ್ಯಾಕ್ ಮೇಲೆ ಎಸೆದು ಯುವಕನ ಕೊಲೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button