Latest

ರಾಜ್ಯಸಭಾ ಚುನಾವಣೆ: ಬಿಜೆಪಿಯಿಂದ ನಟ ಜಗ್ಗೇಶ್, ನಿರ್ಮಲಾ ಸೀತಾರಮನ್ ಗೆ ಟಿಕೆಟ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಕರ್ನಾಟಕದಿಂದ ಮತ್ತೊಮ್ಮೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಟಿಕೆಟ್ ನೀಡಲಾಗಿದೆ.

ಕರ್ನಾಟಕದಿಂದ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ. ಎರಡನೇ ಬಾರಿಗೆ ಟಿಕೆಟ್ ಆಕಾಂಕ್ಷಿಯಾಗಿದ್ದ ಹಾಲಿ ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿಯವರಿಗೆ ಟಿಕೆಟ್ ಕೈತಪ್ಪಿದೆ.

ಮಹಾರಾಷ್ಟ್ರದಿಂದ ಪಿಯೂಷ್ ಘೋಯಲ್, ಡಾ.ಅನಿಲ್ ಸುಖದೇವ್ ಬೋಂಡೆ, ರಾಜಸ್ಥಾನದಿಂದ ಘನಶ್ಯಾಮ ತಿವಾರಿ, ಉತ್ತರಪ್ರದೇಶದಿಂದ ಲಕ್ಷ್ಮಿಕಾಂತ್ ವಾಜಪೇಯಿ ಹಾಗೂ ಡಾ.ರಾಧಾ ಮೋಹನ್ ಅಗರ್ ವಾಲ್ ಕಣಕ್ಕಿಳಿದಿದ್ದಾರೆ.
ಆರ್ ಎಸ್ ಎಸ್ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ ಕೆಪಿಸಿಸಿ

Home add -Advt

Related Articles

Back to top button