Latest

66 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ (ಇಲ್ಲಿದೆ ಸಮಗ್ರ ಪಟ್ಟಿ)

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 2021ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, 66ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಈ ಬಾರಿ 66 ಸಾಧಕರಿಗೆ ಪ್ರಶಸ್ತಿ ಘೋಷಿಸಲಾಗಿದೆ.

ಪ್ರಮುಖವಾಗಿ 10 ಸಂಘ-ಸಂಸ್ಥೆಗಳಿಗೆ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿ, ಆಡಳಿತ ಕ್ಷೇತ್ರದಲ್ಲಿ ಹೆಚ್.ಆರ್.ಕಸ್ತೂರಿ ರಂಗನ್, ಹಾವೇರಿ ಯೋಧ ನವೀನ್ ನಾಗಪ್ಪ, ಯಕ್ಷಗಾನ ಕ್ಷೇತ್ರದಲ್ಲಿ ಶಿವಮೊಗ್ಗದ ಗೋಪಾಲಾಚಾರ್ಯ ಹಾಗೂ ನಾಲ್ವರು ಹೊರನಾಡು ಕನ್ನಡಿಗರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ.

ಸಾಹಿತ್ಯ ಕ್ಷೇತ್ರದಲ್ಲಿ 6 ಸಾಧಕರಿಗೆ – ಮಹದೇವ ಶಂಕನಪುರ, ಪ್ರೊ.ಡಿ.ಟಿ.ರಂಗಸ್ವಾಮಿ, ಜಯಲಕ್ಷ್ಮಿ ಮಂಗಳ ಮೂರ್ತಿ ಸೇರಿದಂತೆ 6 ಸಾಧಕರಿಗೆ, ರಂಗಭೂಮಿ ಕ್ಷೇತ್ರದಲ್ಲಿ ಫಕಿರವ್ವ ರಾಮಪ್ಪ ಕೊಡಾಯಿ, ಪ್ರಕಾಶ್ ಬೆಳವಾಡಿ, ರಮೇಶ್ ಗೌಡ ಪಾಟೀಲ್, ಎನ್ ಮಲ್ಲೇಶಯ್ಯ ಹಾಗೂ ಸಾವಿತ್ರಿ ಗೌಡರ್ ಸೇರಿ ಐವರು ಸಾಧಕರಿಗೆ, ಜಾನಪದ ಕ್ಷೇತ್ರದಲ್ಲಿ 7 ಸಾಧಕರಿಗೆ ಸಂಗೀತ ಕ್ಷೇತ್ರದಲ್ಲಿ ಕೋಲಾರದ ಸಿ.ತ್ಯಾಗರಾಜು ಹಾಗೂ ದಕ್ಷಿಣ ಕನ್ನಡದ ಹೆರಾಲ್ಡ್ ಸಿರಿಲ್ ಡಿಸೋಜಾ ಇಬ್ಬರು ಸಾಧಕರಿಗೆ ಹಾಗೂ ಶಿಲ್ಪಕಲಾ ಕ್ಷೇತ್ರದಲ್ಲಿ ಡಾ.ಜಿ.ಜ್ಞಾನಾನಂದ ಹಾಗೂ ವೆಂಕಣ್ಣ ಚಿತ್ರಗಾರಗೆ  ಈಬಾರಿ ಪ್ರಶಸ್ತಿ ಘೋಷಿಸಲಾಗಿದೆ.

ಇಲ್ಲಿದೆ ಸಮಗ್ರ ವಿವರ – 

New Doc 2021-10-31 16.08.20

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button