Kannada NewsKarnataka NewsLatest

ಸಂತ್ರಸ್ತ ಪ್ರದೇಶಗಳಿಗೆ ರಾಮಲಿಂಗಾ ರಡ್ಡಿ, ವೇಮನಾನಂದ ಸ್ವಾಮೀಜಿ ಭೇಟಿ

ಸಂತ್ರಸ್ತ ಪ್ರದೇಶಗಳಿಗೆ ರಾಮಲಿಂಗಾ ರಡ್ಡಿ, ವೇಮನಾನಂದ ಸ್ವಾಮೀಜಿ ಭೇಟಿ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
ಘಟಪ್ರಭಾ ನದಿಯ ಪ್ರವಾಹಕ್ಕೆ ಅಪಾರ ಪ್ರಮಾಣದಲ್ಲಿ ಜಲಾವೃತಗೊಂಡ ಮೂಡಲಗಿ ತಾಲೂಕಿನ ಪಿವೈ ಹುಣಶ್ಯಾಳ, ಢವಳೇಶ್ವರ, ಅರಳಿಮಟ್ಟಿ, ಅವರಾದಿ ಗ್ರಾಮದ ಗಂಜಿ ಕೇಂದ್ರಗಳಿಗೆ ಮಾಜಿ ಗೃಹ ಸಚಿವ ಹಾಗೂ ಬೆಂಗಳೂರ ಬಿಟಿಎಂ ಲೇ ಔಟ್ ಶಾಸಕ ರಾಮಲಿಂಗಾರಡ್ಡಿ ಮತ್ತು ಹರಿಹರ ತಾಲೂಕಿನ ಏರೆ ಹೊಸಳ್ಳಿಯ ಶ್ರೀ ವೇಮನ ಪೀಠದ ಪೀಠಾಧಿಪತಿ ಶ್ರೀ ವೇಮನಾನಂದ ಸ್ವಾಮೀಜಿ ಭೇಟಿ ನೀಡಿದ್ದರು.
ಸಂತ್ರಸ್ತರಿಗೆ ನಿತ್ಯ ಬಳಕೆ ವಸ್ತುಗಳು, ಹಾಸಿಗೆ, ಬಟ್ಟೆ, ಮೇವು ಇತರೆ ವಸ್ತುಗಳನ್ನು ಶುಕ್ರವಾರ ವಿತರಿಸಿ  ಸಾಂತ್ವನದ ಮಾತುಗಳನ್ನಾಡಿ ಧೈರ್ಯ ತುಂಬಿದರು.
   ಶಾಸಕ ರಾಮಲಿಂಗರಡ್ಡಿ ಅವರು ಪ್ರತಿಯೊಂದು ಕೇಂದ್ರದಲ್ಲಿನ ಸಂತ್ರಸತರೊಂದಿಗೆ ಮಾತನಾಡಿ, ಅವರ ಕಷ್ಟ ಕಾರ್ಪಣ್ಯಗಳನ್ನು ಆಲಿಸಿ ಸರಕಾರದಿಂದ ಸಿಗುವ ಪರಿಹಾರವನ್ನು ಶಿಘ್ರವಾಗಿ ತಲುಪುವಂತೆ ಕೇಂದ್ರ ಮತ್ತು ರಾಜ್ಯ ಸರಕಾರ ಮೇಲೆ ಒತ್ತಡ ಹಾಕಿ ತಮ್ಮ ಸಮಸ್ಯೆಗಳನ್ನು ಬೇಗ ಪರಿಹರಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.
  ನಂತರ ಪತ್ರಕರ್ತರೊಂದಿಗೆ ಮಾತನಾಡಿದ ರಾಮಲಿಂಗಾರಡ್ಡಿ ಅವರು, ಈ ಹಿಂದೆ ರಾಜ್ಯದಲ್ಲಿ ಪ್ರವಾಹ ಎದುರಾದ ಸಂದರ್ಭದಲ್ಲಿ ಮನಮೋಹನಸಿಂಗ್ ಅವರು ತಕ್ಷಣ ಎರಡು ಸಾವಿರ ಕೋಟಿ ರೂ ಘೋಷಿಸಿದ್ದರು. ಸಧ್ಯದ ಪ್ರವಾಹ  ಪೀಡಿತ ಪ್ರದೇಶಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸಿತಾರಾಮನ್ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಭೇಟಿ ನೀಡಿ ವೈಮಾನಿಕ ಸಮೀಕ್ಷೆ ಮಾಡಿದರು. ಆದರೂ ಸಹ ಇನ್ನೂ ಪರಿಹಾರ ಘೋಷಣೆ ಮಾಡಿಲ್ಲ  ಎಂದರು. ಪ್ರವಾಹದಿಂದಾಗಿ ರೈತ ಮನೆ ಹಾಗೂ ಬೆಳೆಗಳು, ಮನೆಯಲ್ಲಿದ್ದ ವಸ್ತುಗಳನ್ನು ಕಳೆದುಕೊಂಡಿವರಿಗೆ ಶೀಘ್ರವಾಗಿ ಶಾಸ್ವತವಾಗಿ ಪರಿಹಾರ ನೀಡುವಂತೆ ಮುಖ್ಯ ಮಂತ್ರಿಯವರ ಜೊತೆ ಮಾತನಾಡಿ ತಮ್ಮ ಕಷ್ಟಗಳು ಪರಿಹರಿಸಲು ಶ್ರಮಿಸುವದಾಗಿ ಹೇಳಿದರು.

ಬಾಣಂತಿಯ ಆರೋಗ್ಯ ವಿಚಾರಣೆ:

ಶಾಸಕ ರಾಮಲಿಂಗಾರಡ್ಡಿ ಅವರು ಶುಕ್ರವಾರ ಉತ್ತರ ಕರ್ನಾಟಕದ ಪ್ರವಾಹ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಢವಳೇಶ್ವರ ಗಂಜಿ ಕೇಂದ್ರದಲ್ಲಿದ್ದ ಬಾಣಂತಿಯ ಆರೋಗ್ಯ ವಿಚಾರಿಸಿದರು.
ಡವಳೇಶ್ವರ ಗ್ರಾಮದ ಸ್ವಾತಿ ಕೃಷ್ಣಪ್ಪ ತುಂಗಳ ಎಂಬ ಮಹಿಳೆ ಕಳೆದ ಮೂರು ನಾಲ್ಕು ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಗ್ರಾ.ಪಂ ಕೊಠಡಿಯಲ್ಲಿ ಆಶ್ರಯ ಪಡೆದಿದ್ದಳು. ಮಹಿಳೆಯತ್ತ ಧಾವಿಸಿ ಆರೋಗ್ಯ ವಿಚಾರಿಸಿದ ಅವರು ಅಳಲನ್ನು ಆಲಿಸಿ ಮಗುವಿನ ಯೋಗ ಕ್ಷೇಮದ ಕಾಳಜಿವಹಿಸುವಂತೆ ಸಲಹೆ ನೀಡಿದರು. ಬಾಣಂತಿಗೆ ಐದು ಸಾವಿರ ರೂ. ಧನ ಸಹಾಯನೀಡಿ ಮಾನವೀಯತೆ ಮೆರೆದರು.

ಸಂತ್ರಸ್ತರ ಮಕ್ಕಳ ವಿಚಾರಿಸಿದ ರಡ್ಡಿ:

ಹುಣಶ್ಯಾಳ ಪಿ.ವಾಯ್ ಮತ್ತು ಅವರಾದಿ ಗ್ರಾಮದ ಸಂತ್ರಸ್ತ ಮಕ್ಕಳೊಂದಿಗೆ ಬೆರೆತು ಯೋಗಕ್ಷೇಮ, ಪಠ್ಯೆತರ ಚಟುವಟಿಕೆ, ಅಭ್ಯಾಸದ ಬಗ್ಗೆ ವಿಚಾರಿಸಿ ಚಾಕ್ಲೇಟ್, ಬಿಸ್ಕೇಟ್, ಒಣ ತಿನಿಸು ನೀಡಿದರು.
  ಏರೆ ಹೊಸಳ್ಳಿಯ ಶ್ರೀ ವೇಮನ್ ಪೀಠದಿಂದ ಮತ್ತು ಬೆಂಗಳೂರಿನಿಂದ 4 ಲಾರಿಗಳಲ್ಲಿ ಗೃಹ ಬಳಕೆ ವಸ್ತುಗಳು, ಆಹಾರ ಧಾನ್ಯ, ಬಟ್ಟೆ, ಹಾಸಿಗೆ, ಹೊದಿಕೆ, ಮೇವು, ಮಕ್ಕಳಿಗೆ ತಿನಿಸುಗಳು, ಪಾತ್ರೆಗಳು ಇತರೆ ವಸ್ತುಗಳನ್ನು ನೀಡಿದರು.
    ಹುಣಶ್ಯಾಳ, ಢವಳೇಶ್ವರ, ಅರಳಿಮಟ್ಟಿ, ಅವರಾದಿ ಗ್ರಾಮದ ಮುಖಂಡರು ಶ್ರೀ ವೇಮನಾನಂದ ಸ್ವಾಮೀಜಿಗಳನ್ನು ಮತ್ತು  ಶಾಸಕ ರಾಮಲಿಂಗಾರಡ್ಡಿ ಅವರಿಗೆ ಕೃತಜ್ಞತೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಡ್ಡಿ ಜನಸಂಘದ ಶೇಖರ ರಡ್ಡಿ, ಕೃಷ್ಣಾ ರಡ್ಡಿ(ಕೀಟಿ), ಶ್ರೀನಿವಾಸ ರಡ್ಡಿ, ಮಾಜಿ ಶಾಸಕ ಆರ್.ವಿ.ಪಾಟೀಲ, ವಿಜಯ ಸೋನವಾಲ್ಕರ, ಅಜ್ಜಪ್ಪ ಗಿರಡ್ಡಿ, ಈರಣ್ಣಾ ಜಾಲಿಬೇರಿ, ರಮೇಶ ಊಟಗಿ, ಎಮ್.ಎಮ್ ಪಾಟೀಲ, ಡಾ: ಅಮಾತೇಪ್ಪನ್ನವರ, ಪ್ರಕಾಶ ಸೋನವಾಲ್ಕರ, ಸುಭಾಸ ವಂಟಗೋಡಿ, ಪರ್ವತಗೌಡ ಪಾಟೀಲ, ಸಂತೋಷ ಸೋನವಾಲ್ಕರ್, ಸತೀಶ ವಂಟಗೋಡಿ  ಶ್ರೀಕಾಂತ ಚನ್ನಾಳ, ಶಿವನಗೌಡ ಪಾಟೀಲ, ನಾರಾಯಣ ಹಾದಿಮನಿ, ನಿಂಗಪ್ಪ ಕುರಬೇಟ ಮತ್ತಿತರರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button