
ಪ್ರಗತಿವಾಹಿನಿ ಸುದ್ದಿ; ರಾಮನಗರ: ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆ ಕೆಂಚನಗುಪ್ಪೆ ಗ್ರಾಮದ ಕುಂಬಾರ ಕಟ್ಟೆಯಲ್ಲಿ ನಡೆದಿದೆ.
11 ವರ್ಷದ ಕೌಶಿಕ್ ಹಾಗೂ 12 ವರ್ಷದ ಕರಣ್ ಮೃತ ಬಾಲಕರು. ಇಬ್ಬರೂ ಬಾಲಕರು ಬಿಡದಿ ನಿವಾಸಿಗಳಾಗಿದ್ದಾರೆ. ಕೆರೆಕಟ್ತೆಗೆ ಈಜಲೆಂದು ಹೋದವರು ಎಷ್ಟು ಹೊತ್ತಾದರೂ ಮನೆಗೆ ಬಾರದಿದ್ದಾಗ ಪೋಷಕರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಕೆರೆಯಲ್ಲಿ ಬಾಲಕರ ಮೃತದೇಹ ಪತ್ತೆಯಾಗಿದೆ.
ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ