ಪ್ರಗತಿವಾಹಿನಿ ಸುದ್ದಿ, ಮುಂಬೈ: ಮಹಾರಾಷ್ಟ್ರದ ನೂತನ ರಾಜ್ಯಪಾಲರಾಗಿ ರಮೇಶ್ ಬೈಸ್ ಅವರನ್ನು ನೇಮಕ ಮಾಡಲಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಜಿ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರ ರಾಜೀನಾಮೆಯನ್ನು ಅಂಗೀಕರಿಸಿದ ನಂತರ ಈ ಬೆಳವಣಿಗೆ ನಡೆದಿದೆ.
ಜನವರಿಯಲ್ಲಿ, ಕೋಶ್ಯಾರಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಎಲ್ಲ ರಾಜಕೀಯ ಜವಾಬ್ದಾರಿಗಳನ್ನು ನಿರ್ವಹಿಸುವ ಬಯಕೆಯನ್ನು ತಿಳಿಸಿದ್ದರು. ಮತ್ತು ತಮ್ಮ ಉಳಿದ ಜೀವನವನ್ನು ಓದುವುದು, ಬರೆಯುವುದು ಮತ್ತು ಇತರ ಚಟುವಟಿಕೆಗಳಲ್ಲಿ ಕಳೆಯುವುದಾಗಿ ಹೇಳಿಕೊಂಡಿದ್ದರು.
ನೂತನ ರಾಜ್ಯಪಾಲ ರಮೇಶ ಬೈಸ್ ಅವರು ಈ ಮೊದಲು ಜಾರ್ಖಂಡದ 10ನೇ ಹಾಗೂ ತ್ರಿಪುರಾದ 18ನೇ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. 1999ರಲ್ಲಿ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಸರಕಾರದಲ್ಲಿ ಅರಣ್ಯ ಮತ್ತು ಪರಿಸರ ಖಾತೆಯ ರಾಜ್ಯ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಅವರು ರಾಯಪುರ ಲೋಕಸಭಾ ಕ್ಷೇತ್ರದಿಂದ (1996-2019) 9, 11 ಹಾಗೂ 16ನೇ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ಭಾವೈಕ್ಯತೆ ವೃದ್ಧಿ: ಪಿ.ಜಿ.ಆರ್ ಸಿಂಧ್ಯಾ
https://pragati.taskdun.com/morale-development-by-scouts-and-guides-pgr-sindhya/
*ಇಬ್ಬರು ಪುಟ್ಟ ಮಕ್ಕಳ ಕತ್ತು ಹಿಸುಕಿ ಕೊಂದ ತಂದೆ*
https://pragati.taskdun.com/fathermurdertwo-childrenraichur/
*ಅಡಿಕೆ ಸಂಶೋಧನಾ ಕೇಂದ್ರಕ್ಕೆ ಬಜೆಟ್ ನಲ್ಲಿ ವಿಶೇಷ ಅನುದಾನ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
https://pragati.taskdun.com/special-grant-in-budget-for-peanut-research-center-chief-minister-basavaraja-bommai/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ