Kannada NewsKarnataka News

ರಮೇಶ ಜಾರಕಿಹೊಳಿ 2 ಸೇರಿ 17 ನಾಮಪತ್ರ ಸಲ್ಲಿಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮೇ 10ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಬೆಳಗಾವಿ ಜಿಲ್ಲೆಯಲ್ಲಿ ಮೊದಲ ದಿನವಾದ ಗುರುವಾರ 17 ನಾಮಪತ್ರಗಳು ಸಲ್ಲಿಕೆಯಾಗಿವೆ.

ನಿಪ್ಪಾಣಿಯಲ್ಲಿ 4, ಅಥಮಿಯಲ್ಲಿ 3, ಗೋಕಾಕದಲ್ಲಿ 2, ಖಾನಾಪುರದಲ್ಲಿ 3, ಸವದತ್ತಿಯಲ್ಲಿ 2, ಕಿತ್ತೂರು, ಬೈಲಹೊಂಗಲ ಹಾಗೂ ರಾಮದುರ್ಗದಲ್ಲಿ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿವೆ. 15 ನಾಮಪತ್ರ ಪುರುಷರಿಂದ ಹಾಗೂ 2 ಮಹಿಳೆಯರಿಂದ ಸಲ್ಲಿಕೆಯಾಗಿವೆ.

Home add -Advt

ಗೋಕಾಕದಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಬಿಜೆಪಿ ಪರವಾಗಿ 2 ನಾಮಪತ್ರ ಸಲ್ಲಿಸಿದರು. ಅಥಮಿಯಲ್ಲಿ ಆಪ್ ನಿಂದ ಒಂದು ನಾಮಪತ್ರ ಸಲ್ಲಿಕೆಯಾಗಿದೆ. ನೊಂದಾಯಿಸಲ್ಪಡದ ಪಕ್ಷಗಳಿಂದ 8 ಹಾಗೂ ಪಕ್ಷೇತರರಿಂದ 6 ನಾಮಪತ್ರ ಸಲ್ಲಿಕೆಯಾಗಿದೆ.

ನಿಪ್ಪಾಣಿಯಲ್ಲಿ ಪಕ್ಷೇತರರಾಗಿ ಉತ್ತಮ ಪಾಟೀಲ ಮತ್ತು ಅವರ ಪತ್ನಿ ಧರಶ್ರೀ ಪಾಟೀಲ ನಾಮಪತ್ರ ಸಲ್ಲಿಸಿದರು.

https://pragati.taskdun.com/do-you-know-the-vow-made-by-lakshmana-savadi-in-the-big-conference/

Related Articles

Back to top button