Uncategorized

ರಮೇಶ ಜಾರಕಿಹೊಳಿ – ಶಾಮ್ ಘಾಟಗೆ ಭೇಟಿ : ರಾಜಕೀಯ ಕುತೂಹಲ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬೆಳಗಾವಿ ಜಿಲ್ಲೆಯ ರಾಜಕೀಯದಲ್ಲಿ ಮತ್ತೊಂದು ಕುತೂಹಲಕರ ಬೆಳವಣಿಗೆ ನಡೆದಿದೆ.  ಕುಡಚಿ ಕ್ಷೇತ್ರದ ಮಾಜಿ ಶಾಸಕ, ಕಾಗ್ರೆಸ್ ಟಿಕೆಟ್ ಆಕಾಂಕ್ಷಿ ಶಾಮ್ ಘಾಟಗೆ ಮತ್ತು ಮಾಜಿ ಸಚಿವ, ಬಿಜೆಪಿ ನಾಯಕ ರಮೇಶ ಜಾರಕಿಹೊಳಿ ಬುಧವಾರ ಬೆಳಗ್ಗೆ ಭೇಟಿಯಾಗಿದ್ದಾರೆ.

ಬೆಂಗಳೂರಿನ ರಮೇಶ ಜಾರಕಿಹೊಳಿ ಮನೆಯಲ್ಲಿ ಈ ಭೇಟಿ ನಡೆದಿದೆ. ಈ ಇಬ್ಬರು ನಾಯಕರ ಭೇಟಿ ಬಿಜೆಪಿಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಇಬ್ಬರೂ ಕೆಲಹೊತ್ತು ಚರ್ಚೆ ನಡೆಸಿದ್ದಾರೆ. ಕುಡಚಿ ಕ್ಷೇತ್ರದಿಂದ ಪಿ.ರಾಜೀವ ಬಿಜೆಪಿಯ ಹಾಲಿ ಶಾಸಕ. ಈ ಬಾರಿಯೂ ಅವರು ಸ್ಪರ್ಧಿಸುವ ಇಚ್ಛೆ ಹೊಂದಿದ್ದಾರೆ. ಅವರ ವಿರುದ್ಧ ಕಾಗ್ರೆಸ್ ನಿಂದ ಶಾಮ್ ಘಾಟಗೆ ಸ್ಪರ್ಧಿಸಲು ಮುಂದಾಗಿದ್ದಾರೆ.  ಕಾಂಗ್ರೆಸ್ ನಲ್ಲಿ ಹಲವು ಆಕಾಂಕ್ಷಿಗಳಿದ್ದು ಟಿಕೆಟ್ ಇನ್ನೂ ಅಂತಿಮವಾಗಿಲ್ಲ.

ಈ ಸಂದರ್ಭದಲ್ಲಿ ಶಾಮ್ ಘಾಟಗೆ ಮತ್ತು ರಮೇಶ ಜಾರಕಿಹೊಳಿ ಭೇಟಿ ತೀವ್ರ ಕುತೂಹಲ ಮೂಡಿಸಿದೆ.

 

ವಿಶೇಷವಾಗಿ ಬಿಜೆಪಿ ವಲಯದಲ್ಲಿ ಈ ಬಗ್ಗೆ ತೀವ್ರ ಚರ್ಚೆ ಆರಂಭವಾಗಿದೆ. ಪಿ.ರಾಜೀವ ಅವರನ್ನು ಕುಡಚಿ ಕ್ಷೇತ್ರದಿಂದ ಬದಲಿಸುವ ಸುದ್ದಿ ಕೆಲವು ದಿನಗಳ ಹಿಂದೆ ಹರಿದಾಡಿತ್ತು. ಜೊತೆಗೆ, ಸಚಿವ ಗೋವಿಂದ ಕಾರಜೋಳ ಅರ ಪುತ್ರ ಉಮೇಶ ಕಾರಜೋಳ ಕುಡಚಿ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಘಾಟಗೆ – ಜಾರಕಿಹೊಳಿ ಭೇಟಿ ಹಲವು ರೀತಿಯ ಚರ್ಚೆಗೆ ಕಾರಣವಾಗಿದೆ.

 

ಯಾವ ಕಾರಣದಿಂದ ಈ ಭೇಟಿ ನಡೆದಿದೆ ಎನ್ನುವುದನ್ನು ಇಬ್ಬರೂ ಬಹಿರಂಗಪಡಿಸಿಲ್ಲ. ಈ ಕುರಿತು ಪ್ರಗತಿವಾಹಿನಿ ಜೊತೆ ಮಾತನಾಡಿದ ಶಾಮ್ ಘಾಟಗೆ, ರಮೇಶ ಜಾರಕಿಹೊಳಿ ಅವರ ಕಾಲಿಗೆ ಪೆಟ್ಟಾಗಿದೆ. ಹಾಗಾಗಿ ಅವರನ್ನು ನೋಡಲು ನಾನು ಹೋಗಿದ್ದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ರಾಜಕೀಯ ವಿಷಯ ಚರ್ಚೆಗೆ ನಡೆಯಿತೇ ಎನ್ನುವ ಪ್ರಶ್ನೆಗೆ, ಅಂತದ್ದೇನಿಲ್ಲ ಎಂದಷ್ಟೇ ತಿಳಿಸಿದರು.

ಸಮಾಜಘಾತುಕ ಚಟುವಟಿಕೆ; ಬೆಳಗಾವಿಯಿಂದ ಇಬ್ಬರು ಗಡಿಪಾರು

https://pragati.taskdun.com/antisocial-activity-two-exiles-from-belagavi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button