Kannada NewsLatest

ಎಂಟಿಬಿಯಿಂದ ಯೋಗೇಶ್ವರ್ ಸಾಲ ಪಡೆದು ನಮ್ಮನ್ನು ಒಗ್ಗೂಡಿಸಿದ್ದರು: ಸಚಿವ ರಮೇಶ್ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸಿ.ಪಿ.ಯೋಗೇಶ್ವರ್ ಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿರುವುದು ಸರಿಯಾಗಿದೆ ಎಂದು ಯೋಗೇಶ್ವರ್ ಪರ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಬ್ಯಾಟಿಂಗ್ ಮಾಡಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಜಾರಕಿಹೊಳಿ, ಬಿಜೆಪಿ ಸರ್ಕಾರ ರಚನೆಯಲ್ಲಿ ಯೋಗೇಶ್ವರ್ ಪಾತ್ರ ಪ್ರಮುಖವಾಗಿದೆ. ವಲಸೆ ಬಂದ ಶಾಸಕರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಅವರು ಸಾಕಷ್ಟು ಕಷ್ಟಪಟ್ಟಿದ್ದಾರೆ. ಯೋಗೇಶ್ವರ್ ತನ್ನ ಮನೆಯ ಮೇಲೆ 9 ಕೋಟಿ ರೂ ಸಾಲ ಮಾಡಿ ನಮ್ಮನ್ನು ರಕ್ಷಿಸಿದ್ದರು. ಎಂಟಿಬಿ ನಾಗರಾಜ್ ಅವರಿಂದ ಸಾಲ ಪಡೆದುಕೊಂಡಿದ್ದರು ಎಂದು ಹೇಳಿದ್ದಾರೆ.

Home add -Advt

ಸಿ.ಪಿ ಯೋಗೇಶ್ವರ್ ಅವರು ರಿಸ್ಕ್ ತೆಗೆದುಕೊಂಡು, ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಂಡು ನಮ್ಮನ್ನು ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅಷ್ಟೆಲ್ಲ ಕಷ್ಟಪಟ್ಟು ಅವರು ನಮ್ಮನ್ನು ಒಟ್ಟುಗೂಡಿಸುವ ಅಗತ್ಯವೇನಿತ್ತು. ಸರ್ಕಾರ ರಚನೆಯಲ್ಲಿ ಅವರ ಪಾತ್ರ ಮಹತ್ವದ್ದು. ಹಾಗಾಗಿ ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಸಿಕ್ಕಿರುವುದು ಒಳ್ಲೆಯ ವಿಚಾರ ಎಂದು ಹೇಳಿದರು.

Related Articles

Back to top button