ಬಲವಂತದ ಹೇಳಿಕೆ ಎಂಬ ಗುಮಾನಿ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ರೇಪ್ ಕೇಸ್ ದಾಖಲಿಸಿ ತನಿಖೆ ನಡೆಸಬೇಕು ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ರೇಪ್ ಎಂಬ ಪದ ಬಳಕೆ ಮಾಡಬೇಡಿ, ಶೋಭೆತರಲ್ಲ ಎಂದು ಗುಡುಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವತಿಯ 34 ಸೆಕೆಂಡುಗಳ ವಿಡಿಯೋ ಇಟ್ಟುಕೊಂಡು ರಮೇಶ್ ಜಾರಕಿಹೊಳಿ ಮೇಲೆ ಕೇಸ್ ಹಾಕಬೇಕು ಎಂಬುದು ಸರಿಯಲ್ಲ. ಯುವತಿ ಸ್ವ ಇಚ್ಛೆಯಿಂದ ಮಾತನಾಡಿದ್ದಾಳಾ ಅಥವಾ ಬಲವಂತದಿಂದ ಮಾತನಾಡಿದ್ದಾಳಾ ಎಂಬುದು ಗೊತ್ತಿಲ್ಲ. ಹಾಗಾಗಿ ಸಿದ್ದರಾಮಯ್ಯ ಅವರ ಹೇಳಿಕೆ ಸರಿಯಲ್ಲ. ಇನ್ನು ಸಿದ್ದರಾಮಯ್ಯನವರು ರೇಪ್ ಕೇಸ್ ಹಾಕಬೇಕು ಎಂದಿದ್ದಾರೆ. ದಯಮಾಡಿ ರೇಪ್ ಎಂಬ ಶಬ್ಧ ಬಳಸಬೇಡಿ, ಇಂತಹ ಹೇಳಿಕೆ ನಿಮಗೆ ಶೋಭೆ ತರಲ್ಲ ಎಂದರು.
ಯುವತಿಗೆ ರಕ್ಷಣೆ ನೀಡಲು ಗೃಹ ಇಲಾಖೆ ಸಿದ್ಧವಿದೆ. ಆಕೆ ಬಂದು ಹೇಳಿಕೆಗಳನ್ನು ದಾಖಲಿಸಲಿ. ಒಂದು ಟೀಂ ಯುವತಿಯನ್ನು ಒತ್ತಾಯಪೂರ್ವಕವಾಗಿ ಮುಂದಿಟ್ಟುಕೊಂಡು ವಿಡಿಯೋ ಮಾಡಿಸಿದ್ದಾರೆ ಎಂಬ ಸುದ್ದಿ ಇದೆ. ಈ ಬಗ್ಗೆ ತನಿಖೆಯಾಗಲಿ ಎಂದು ಹೇಳಿದರು.
ರಮೇಶ್ ಜಾರಕಿಹೊಳಿ ವಿರುದ್ಧ ರೇಪ್ ಕೇಸ್ ದಾಖಲಿಸಿ ತನಿಖೆ ನಡೆಸಲಿ; ಸಿದ್ದರಾಮಯ್ಯ ಆಗ್ರಹ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ