
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ ವೈದ್ಯರ ತಂಡ ಆತನ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದ ಘಟನೆ ಬೆಂಗಳೂರಿನ ಬಾಗಲೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಯಲಹಂಕ ನಿವಾಸಿ ಮುರುಳಿ (26) ಹಲ್ಲೆಗೊಳಗಾದ ಆಟೋ ಚಾಲಕ ಎನ್ನಲಾಗಿದೆ. ಖಾಸಗಿ ಹೋಟೆಲ್ ನಲ್ಲಿ ವೈದ್ಯರ ತಂಡ ಪಾರ್ಟಿ ನಡೆಸುತ್ತಿತ್ತು. ಈ ವೇಳೆ ಹೋಟೆಲ್ ಗೆ ಅಡುಗೆ ವಸ್ತುಗಳನ್ನು ಸಾಗಿಸಲು ಆಟೋ ಚಾಲಕ ಹೋಗಿದ್ದ. ಈ ವೇಳೆ ಪಾರ್ಟಿ ಮಾಡುತ್ತಿದ್ದ ವೈದ್ಯರು ತಮ್ಮ ಇನ್ನೋರ್ವ ವೈದ್ಯ ಸ್ನೇಹಿತನನ್ನು ಆಟೋದಲ್ಲಿ ಕರೆದುಕೊಂಡು ಬರುವಂತೆ ಹೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ಆಟೋ ಚಾಲಕ ಒಪ್ಪಿಲ್ಲ. ಈ ವಿಚಾರವಾಗಿ ವೈದ್ಯರ ಗುಂಪು ಹಾಗೂ ಆಟೋ ಚಾಲಕನ ನಡುವೆ ಮಾತಿಗೆ ಮಾತು ಬೆಳೆದಿದೆ. ವೈದ್ಯರು ಆಟೋ ಚಾಲಕನನ್ನು ವಿವಸ್ತ್ರಗೊಳಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಕೇಳಿಬಂದಿದೆ.
ಆಟೋ ಚಾಲಕ ನೀಡಿದ ದೂರಿನ ಅನ್ವಯ ಖಾಸಗಿ ಆಸ್ಪತ್ರೆಯ ವೈದ್ಯರನ್ನು ಪೊಲೀಸರು ಬಂಧಿಸಿದ್ದಾರೆ.