*ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ ರಮೇಶ್ ಜಾರಕಿಹೊಳಿ; ತೀವ್ರ ಕುತೂಹಲ ಮೂಡಿಸಿದ ಸುದ್ದಿಗೋಷ್ಠಿ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರು ಮತದಾರರನ್ನು ಗೆಲ್ಲಲು ನಾನಾ ಕಸರತ್ತು ನಡೆಸಿದ್ದಾರೆ. ಈ ಮಧ್ಯೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿವೃತ್ತಿಯ ಮಾತನಾಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಆರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಏಳು ಬಾರಿ ಶಾಸಕನಾದ ನಂತರ ರಾಜಕೀಯ ನಿವೃತ್ತಿಯಾಗಬೇಕು ಎಂದಿದ್ದೇನೆ. ಎಂಟನೇ ಬಾರಿ ನಿಲ್ಲಬೇಕಾ? ಬೇಡವಾ? ಎಂಬುದರ ನಿರ್ಧಾರವನ್ನು ಬಿಜೆಪಿ ನಾಯಕರಿಗೆ ಬಿಡುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ.
ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ಮುಂದಿನ ಚುನಾವಣೆಯಲ್ಲಿ ನಿವೃತ್ತಿಯಾಗಬೇಕು ಎಂದುಕೊಂಡಿದ್ದೇನೆ. 7 ಬಾರಿ ಶಾಸಕನಾದ ಬಳಿಕ ಸಾಕಪ್ಪ ಬೇರೆಯವರಿಗೆ ಅವಕಾಶ ಕೊಡೋಣ ಎಂದು. ಈ ಬಾರಿಯೇ ನಾನು ನಿಲ್ಲುತ್ತಿರಲಿಲ್ಲ. ಮಹಾನಾಯಕನನ್ನು ಮೂಲೆಗುಂಪು ಮಾಡಲು ಶಾಸಕ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ. ಆತನನ್ನು ಮನೆಗೆ ಕಳುಹಿಸುವವರೆಗೂ ರಾಜಕೀಯ ನಿವೃತ್ತಿಯಿಲ್ಲ ಎಂದು ಹೇಳಿದ್ದಾರೆ.
ಈ ನಡುವೆ ರಮೇಶ್ ಜಾರಕಿಹೊಳಿ ಇಂದು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದ್ದು, ಅಂದಿನ ಸಿಡಿ ಪ್ರಕರಣದ ಬಗ್ಗೆ ಇಂದು ಆಡಿಯೋ ಬಾಂಬ್ ಸಿಡಿಸುವ ಸಾಧ್ಯತೆ ಇದೆ. ಸಿಡಿ ಕೇಸ್ ನಲ್ಲಿ ಮಹಾನಾಯಕನ ಕೈವಾಡವಿದೆ ಎಂದು ಆರೋಪಿಸಿರುವ ಜಾರಕಿಹೊಳಿ ಈ ಬಗ್ಗೆ ದಾಖಲೆ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಲಿ: ಚನ್ನರಾಜ ಹಟ್ಟಿಹೊಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ