Latest

ಪ್ರತ್ಯೇಕ ಸಭೆ ಸರಿಯಲ್ಲ ಎಂದ ಸಚಿವ ಜಾರಕಿಹೊಳಿ

2023ರವರೆಗೂ ಗ್ರೂಪಿಸಂ ಮಾಡಲ್ಲ

 

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತಮ್ಮನ್ನು ಹೊರತುಪಡಿಸಿ, ಮಿತ್ರಮಂಡಳಿಯ ಸಚಿವ, ಶಾಸಕರು ಸಭೆ ನಡೆಸಿದ್ದ ವಿಚಾರವಾಗಿ ಮಾತನಾಡಿರುವ ಸಚಿವ ರಮೇಶ್ ಜಾರಕಿಹೊಳಿ, ಪ್ರತ್ಯೇಕ ಸಭೆ ನಡೆಸುವುದು ಸರಿಯಲ್ಲ. ಸಭೆ ನಡೆಸುವುದಿದ್ದರೆ ಸಿಎಂ ಎದುರೇ ನಡೆಸಬಹುದಿತ್ತು ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಾರಕಿಹೊಳಿ, ನಾನು ಯಾವುದೇ ನಾಯಕತ್ವವನ್ನು ವಹಿಸಿಲ್ಲ. ನಮ್ಮದು ಸಾಮೂಹಿಕ ನಾಯಕತ್ವ . ನಿನ್ನೆ ನಡೆದ ಮಿತ್ರಮಂಡಳಿ ಸಭೆ ಬಗ್ಗೆ ನಾನು ಯಾವುದೇ ಮಾಹಿತಿ ಕೇಳಿಲ್ಲ. ನಾನಾಗಿಯೇ ಕೇಳಲು ಹೋಗಲ್ಲ. ನನ್ನ ಪ್ರಕಾರ ಯಾವುದೇ ಭಿನಾಭಿಪ್ರಾಯವಿಲ್ಲ. ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಹಾಗೂ ಹೈಕಮಾಂಡ್ ನಿರ್ಧರಿಸುತ್ತಾರೆ. ಅವರ ನಿರ್ಧಾರಕ್ಕೆ ಬದ್ಧರಾಗಿ ನಾವು ನಡೆದುಕೊಳ್ಳಬೇಕು ಎಂದು ಹೇಳಿದರು.

ಇದೇ ವೇಳೆ 2023ರ ವರೆಗೆ ನಾನು ಯಾವುದೇ ಗ್ರೂಪಿಸಂ ಮಾಡಲ್ಲ. ಪಕ್ಷಕ್ಕೆ ಮುಜುಗರ ತರುವ ಕೆಲಸವನ್ನೂ ನಾನು ಮಾಡಲ್ಲ ಎಂದು ಹೇಳಿದರು.

ರಮೇಶ್ ಜಾರಕಿಹೊಳಿ ವಿರುದ್ಧ ತಿರುಗಿ ಬಿದ್ದರಾ ಮಿತ್ರಮಂಡಳಿ ಸದಸ್ಯರು?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button