Latest

ನಾಳೆಯಿಂದ ನಮ್ಮ ಅಸಲಿ ಆಟ ಶುರುವಾಗುತ್ತೆ; ಯುವತಿಗೆ ಸವಾಲು ಹಾಕಿದ ರಮೇಶ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತನ್ನ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಸಿಡಿ ಲೇಡಿ ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ ಮಾತನಾಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಕೊನೇಯ ಅಸ್ತ್ರವನ್ನು ಬಿಟ್ಟಿದ್ದಾರೆ. ನಾಳೆಯಿಂದ ನಮ್ಮ ಆಟ ಶುರುವಾಗುತ್ತೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವತಿ ಏನೇ ದೂರು ದಾಖಲಿಸಿದರೂ ಎದುರಿಸಲು ಸಿದ್ಧ. ಇನ್ನೂ 10 ಸಿಡಿಗಳು ಬಂದರೂ ಎದುರಿಸುತ್ತೇನೆ. ನಾನು ಯಾವುದಕ್ಕೂ ಅಂಜುವ ವ್ಯಕ್ತಿಯಲ್ಲ. ಅಂತಹ ಸರ್ಕಾರವನ್ನೇ ತೆಗೆದಿದ್ದೇನೆ ಇನ್ನು ಇದ್ಯಾವ ಲೆಕ್ಕ…? ಮಹಾನಾಯಕ ಯಾರೆಂದು ಕೂಡ ಗೊತ್ತಾಗುತ್ತೆ. ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಹೇಳಿದರು.

ಸಿಡಿ ಪ್ರಕರಣ ಸಂಬಂಧ ನಾನು ಮೊದಲು ದೂರು ನೀಡಿದ್ದೇನೆ. ನನ್ನ ದೂರಿನ ಬಗ್ಗೆ ಪೊಲೀಸ್ ಆಯುಕ್ತ ಕಮಲ್ ಪಂತ್ ರನ್ನು ಕೇಳುತ್ತೇನೆ. ನಾನು ನಿರಪರಾಧಿ. ನಾನು ಹೋರಾಟಗಾರ. ಯಾವುದಕ್ಕೂ ಹೆದರುವ ಪ್ರಶ್ನೆ ಇಲ್ಲ ಎಂದರು.

ಸರಕಾರ ತೆಗೆದು ಸರಕಾರ ಮಾಡೋ ಶಕ್ತಿ ಇದೆ, ಇದ್ಯಾವ ಲೆಕ್ಕ? – ರಮೇಶ ಜಾರಕಿಹೊಳಿ; ಎಫ್ಐಆರ್ ದಾಖಲು

Home add -Advt

ರಮೇಶ್ ಜಾರಕಿಹೊಳಿ ವಿರುದ್ಧ ವಂಚನೆ, ಲೈಂಗಿಕ ದೌರ್ಜನ್ಯ ಸೇರಿ ಹಲವು ಗಂಭೀರ ಆರೋಪದ ದೂರು

Related Articles

Back to top button