Latest

ರಮೇಶ ಜಾರಕಿಹೊಳಿ ಪತ್ರಿಕಾಗೋಷ್ಠಿ ಕುತೂಹಲ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಪತ್ರಿಕಾಗೋಷ್ಠಿ ಕರೆದಿದ್ದು, ಎಲ್ಲರ ಕುತೂಹಲ ನೆಟ್ಟಿದೆ.

ಸಂಜೆ 4 ಗಂಟೆಗೆ ಅವರು ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರು. ಆದರೆ ಹೊರಗಡೆ ಹೋಗಿದ್ದ ರಮೇಶ ಜಾರಕಿಹೊಳಿ 5 ಗಂಟೆ ಹೊತ್ತಿಗೆ ಮನೆಗೆ ಆಗಮಿಸಿದ್ದಾರೆ. ಹಾಗಾಗಿ ಸಂಜೆ 6 ಗಂಟೆಗೆ ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆ ಇದೆ.

ನನ್ನ ಬಳಿ ನಿಮಗೇ ಶಾಕ್ ಆಗುವಂತ ಸಾಕ್ಷಿ ಇದೆ. ನಾಳೆಯಿಂದ ನಮ್ಮ ಆಟ ಶುರು. ಶನಿವಾರ ಸಂಜೆ 4 ಗಂಟೆಯಿಂದ 6 ಗಂಟೆಯೊಳಗೆ ಬಾಂಬ್ ಸಿಡಿಸುತ್ತೇನೆ ಎಂದು ನಿನ್ನೆ ಘೋಷಿಸಿದ್ದ ರಮೇಶ ಜಾರಕಿಹೊಳಿ ಇಂದು ಅದಕ್ಕಾಗಿಯೇ ಪತ್ರಿಕಾಗೋಷ್ಠಿ ಕರೆದಿದ್ದಾರೆ.

ಇನ್ನು ಕೆಲವೇ ಕ್ಷಣಗಳಲ್ಲಿ ಪತ್ರಿಕಾಗೋಷ್ಠಿ ಆರಂಭವಾಗುವ ನಿರೀಕ್ಷೆ ಇದೆ. ಎಲ್ಲರ ಕಣ್ಣು ಅದರತ್ತ ನೆಟ್ಟಿದೆ.

Home add -Advt

ಇದೇ ವೇಳೆ ಸಿಡಿಯಲ್ಲಿರುವ ಯುವತಿಯ ಪೋಷಕರು ಎಸ್ಐಟಿ ಮುಂದೆ ಇಂದು ಬೆಳಗ್ಗೆಯೇ ಹಾಜರಾಗಿದ್ದು ಅವರ ವಿಚಾರಣೆ ಈಗಷ್ಟೆ ಮುಕ್ತಾಯವಾಗಿದೆ.

ನಾಳೆ 4ರಿಂದ 6 ಗಂಟೆವರೆಗೂ ‘ಮಹಾ’ ಬಾಂಬ್ ಇದೆ ಎಂದ ರಮೇಶ್ ಜಾರಕಿಹೊಳಿ

ಎಸ್ ಐಟಿ ಮುಂದೆ ಹಾಜರಾದ ಯುವತಿ ಪೋಷಕರು

 

 

Related Articles

Back to top button