Belagavi NewsBelgaum NewsElection NewsKannada NewsKarnataka NewsPolitics

*ನಾಮಪತ್ರ ಸಲ್ಲಿಸಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ಧುಮುಕಿದ ರಮೇಶ ಕತ್ತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರತಿಷ್ಠತ ಡಿಸಿಸಿ ಬ್ಯಾಂಕ್ ಚುನಾವಣಾ ಕಾವು ಜೋರಾಗಿದ್ದು, ಕತ್ತಿ ವರ್ಸಸ್ ಜಾರಕಿಹೊಳಿ ಕುಟುಂಬಗಳ ನಡುವೆ ಬಿಗ್ ಫೈಟ್ ಏರ್ಪಟ್ಟಿದೆ. ಈ ಮಧ್ಯೆ ರಮೇಶ ಕತ್ತಿ ನಾಮಪತ್ರ ಸಲ್ಲಿಕೆ ಮಾಡಿ, ಚುನಾಚಣೆಗೆ ಧುಮ್ಮಿಕಿದ್ದಾರೆ.

ಬೆಳಗಾವಿ ಪ್ರತಿಷ್ಠತ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಅಕ್ಟೋಬರ್ 19 ರಂದು ಚುನಾವಣೆ ನಡೆಯಲಿದೆ. ಮಂಗಳವಾರ ಬೆಳಗಾವಿ ನಗರದಲ್ಲಿರುವ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಗೆ ಆಗಮಿಸಿದ ಮಾಜಿ ಸಂಸದ ರಮೇಶ ಕತ್ತಿ ಅವರು, ಡಿಸಿಸಿ ಬ್ಯಾಂಕ್ ನ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಅಣ್ಣನ ಮಗ ಶಾಸಕ ನಿಖಿಲ್ ಕತ್ತಿ, ಪುತ್ರ ಪೃಥ್ವಿ ಕತ್ತಿ ಅವರು ಸಾಥ್ ನೀಡಿದರು.

ಈ ಮೂಲಕ ಜಾರಕಿಹೊಳಿ‌ ಬ್ರದರ್ಸ್ ವರ್ಸಸ್ ಕತ್ತಿ ಕುಟುಂಬದ ಮಧ್ಯೆ ಮತ್ತೊಂದು ಸುತ್ತಿನ ಫೈಟ್ ಆರಂಭವಾಗಿದೆ‌. ರಮೇಶ್ ಕತ್ತಿ ಸೋಲಿಸಲು ಈಗಾಗಲೇ ಜಾರಕಿಹೊಳಿ‌ ಬ್ರದರ್ಸ್ ತಂತ್ರಗಾರಿಕೆ ಹೆಣೆದಿದ್ದಾರೆ. ಆದರೆ ರಮೇಶ್ ಕತ್ತಿ ನಾಮಪತ್ರ ಸಲ್ಲಿಸುವ ಮೂಲಕ ಅಧಿಕೃತವಾಗಿ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. 

Home add -Advt

ಡಿಸಿಸಿ ಬ್ಯಾಂಕ್ ಅವರ ಅಪ್ಪನ ಆಸ್ತಿಯಲ್ಲಾ

ಚುನಾವಣಾಗೆ ಯಾರು ಅವಿರೋಧ ಆಗ್ತಾರೆ ನೋಡೋಣ. ಜಿಲ್ಲೆಯ ಜನರು ಹಿತ ಚಿಂತಕರು ಇದ್ದಾರೆ ತಾಲೂಕಿನ ಮತದಾರರು ನಿರ್ಧಾರ ಮಾಡ್ತಾರೆ. ಬಾಲಚಂದ್ರ ಜಾರಕಿಹೊಳಿ‌ ಅವರು ಹೇಳೊದಾಗ್ಲಿ ನಾನು ಹೇಳೊದು ಸೂಕ್ತವಲ್ಲ. ಎಲ್ಲ ಕ್ಷೇತ್ರದಲ್ಲಿ ಅವಿರೋಧ ಆಯ್ಕೆ ಮಾಡ್ತೇವಿ ಎಂಬ ಬಾಲಚಂದ್ರ ಜಾರಕಿಹೊಳಿ‌ ಹೇಳಿಕೆ ವಿಚಾರವಾಗಿ ಮಾತನಾಡಿದರು.

ಪೆನಲ್ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪೆನಲ್ ಅನ್ನೋ ಪ್ರಶ್ನೆ ಇದಕ್ಕೆ ಬರುವುದಿಲ್ಲ. ನಾವು ಯಾವುದೇ ಪೆನಲ್ ಮಾಡುತ್ತಿಲ್ಲ. ಅವಶ್ಯಕತೆ ಕಂಡು ಬಂದ್ರೇ ಯಾರಾದರೂ ಆಹ್ವಾನ ಕೊಟ್ರೇ ಹೋಗುತ್ತೇನೆ. ಈಗಾಗಲೇ ಬಹಳ ಜನರು ಸಂಪರ್ಕ ಮಾಡಿದ್ದಾರೆ. ಯಾರಾದ್ರೂ ಕರೆದ್ರೇ ಹೋಗಿ ಪ್ರಚಾರ ಮಾಡುತ್ತೇನೆ ಎಂದರು.

ಈ ಬ್ಯಾಂಕ್ ಗೆ ಎನಾದ್ರೂ ಆದ್ರೇ ಐವತ್ತು ಲಕ್ಷ ಜನ ಬೀದಿಗೆ ಬರ್ತಾರೆ. ಸಾರ್ವತ್ರಿಕ ಚುನಾವಣೆಗೆ ಲೀಡರ್‌ಶೀಪ್ ಬೇಕು. ಸಹಕಾರಿ ರಂಗಕ್ಕೆ ಲೀಡರ್ ಶೀಪ್ ಅವಶ್ಯಕತೆ ಇಲ್ಲಾ ಎಂದರು.

ಹತ್ತು ಸ್ಥಾನಗಳು ತಮ್ಮೊಟ್ಟಿಗೆ ಇದ್ದಾರೆ ಎಂಬ ಸತೀಶ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಹೇಳಿಕೆಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲಾ ಎಂದರು.

ಬ್ಯಾಂಕ್ ನಿಂದ ನಿಮ್ಮನ್ನ ದೂರ ಇಡ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ದೂರ ಇಡುವುದು ಯಾರ ಕೈಯಲ್ಲಿ ಇಲ್ಲಾ. ಇದು ಅವರ ಅಪ್ಪನ ಆಸ್ತಿ ಅಲ್ಲಾ ಎಂದು ಜಾರಕಿಹೊಳಿ‌ ಅವರಿಗೆ ಕತ್ತಿ ಟಾಂಗ್ ನೀಡಿದರು.

Related Articles

Back to top button