ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿಧಾನಸಭೆಯಲ್ಲಿ ನಿನ್ನೆ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಸಚಿವೆ ಶಶಿಕಲಾ ಜೊಲ್ಲೆ, ರಮೇಶ್ ಕುಮಾರ್ ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಗುಡುಗಿದ್ದಾರೆ.
ವಿಧಾನಸಭೆಯಲ್ಲಿ ನಿನ್ನೆ ಮಾತನಾಡಿದ್ದ ಮಜೈ ಸ್ಪೀಕರ್ ರಮೇಶ್ ಕುಮಾರ್, ಅತ್ಯಾಚಾರ ತಡೆಯಲು ಸಾಧ್ಯವಾಗದಿದ್ದರೆ ಮಲಗಿ ಆನಂದಿಸಿ ಎಂಬ ಮಾತಿದೆ ಎಂದು ಹೇಳಿ ನಕ್ಕಿದ್ದರು. ಮಾಜಿ ಸ್ಪೀಕರ್ ಅವರ ಈ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ.
ಬೆಳಗಾವಿಯಲ್ಲಿ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ, ಓರ್ವ ಮಾಜಿ ಸ್ಪೀಕರ್, ಮಾಜಿ ಸಚಿವ, ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಹೆಣ್ಮಕ್ಕಳ ಬಗ್ಗೆ ಅದರಲ್ಲೂ ವಿರಮೇಶ್ ಕುಮಾರ್ ಹೇಳಿಕೆಗೆ ಸಚಿವೆ ಶಶಿಕಲಾ ಜೊಲ್ಲೆ ಆಕ್ರೋಶಧಾನಸಭೆಯಲ್ಲಿ ಬಹಿರಂಗವಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದರೆ ಪುರುಷ ಸಮಾಜ ಯಾವ ಮಟ್ಟಕ್ಕೆ ಇಳಿದಿದೆ. ರಮೇಶ್ ಕುಮಾರ್ ಮನಸ್ಥಿತಿ ಎಂಥಾದ್ದು ಎಂಬುದನ್ನು ಇದು ತೋರುತ್ತದೆ. ಮಾಜಿ ಸ್ಪೀಕರ್ ಅವರ ಕೀಳುಮಟ್ಟದ ಹೇಳಿಕೆ ಇಡೀ ಮಹಿಳಾ ಸಮಾಜಕ್ಕೆ ಅಪಮಾನ. ತಕ್ಷಣ ಅವರು ಬಹಿರಂಗ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿಯೊಬ್ಬರ ಮನೆಯಲ್ಲಿಯೂ ಹೆಣ್ಮಕ್ಕಳಿದ್ದಾರೆ. ತಾಯಿಯಾಗಿ, ಹೆಂಡತಿಯಾಗಿ, ಅಕ್ಕ, ತಂಗಿ, ಮಗಳಾಗಿ ಮಾತ್ರವಲ್ಲ ಇಂದಿನ ಆಧುನಿಕ ಜಗತ್ತಿನಲ್ಲಿ ಪುರುಷರಿಗೆ ಸರಿ ಸಮಾನವಾಗಿ ಬಾಳುತ್ತಿರುವ ಹೆಣ್ಣನ್ನು ಇವರು ಯಾವ ರೀತಿ ನೋಡುತ್ತಿದ್ದಾರೆ? ಅತ್ಯಾಚಾರವಾದರೆ ಆನಂದಿಸಿ ಎಂದು ಹೇಳುತ್ತಿರುವ ರಮೇಶ್ ಕುಮಾರ್ ಮನಸ್ಥಿತಿ ಎಂಥಾದ್ದು? ಇಂತ ಮನಸ್ಥಿತಿಯ ಪುರುಷರೊಂದಿಗೆ ನಾವು ಕೂಡ ಬದುಕುತ್ತಿದ್ದೇವೆ ಎಂದರೆ ಮಹಿಳೆಯರಿಗೆ ಎಷ್ಟರ ಮಟ್ಟಿಗೆ ರಕ್ಷಣೆ ಇದೆ ಎಂಬುದನ್ನು ಹೇಳಬೇಕು. ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಯಿ ಕೂಡ ಮಾತನಾಡಲಿ ಮಹಿಳೆಯರಿಗೆ ರಕ್ಷಣೆ ನೀಡಲಿ ಎಂದು ಆಗ್ರಹಿಸಿದ್ದಾರೆ.
ಮೂರು ಮಹಿಳಾ ಶಾಸಕಿಯರು ಇಂದು ಸದನಕ್ಕೆ ಕಪ್ಪು ಪಟ್ಟಿ ಧರಿಸಿ ಹಾಜರಾಗುವ ಮೂಲಕ ರಮೇಶ್ ಕುಮಾರ್ ಹೇಳಿಕೆಯನ್ನು ಖಂಡಿಸುತ್ತೇವೆ. ಕ್ಷಮೆಯಾಚಿಸದಿದ್ದರೆ ರಾಜ್ಯಾದ್ಯಂತ ಮಹಿಳೆಯರು ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.
ವಾಣಿಜ್ಯ ಕಟ್ಟಡದಲ್ಲಿ ಬೆಂಕಿ ಅವಘಡ; 27 ಜನರು ಸಜೀವ ದಹನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ