Latest

ಮುಂಬೈ ಹೊಟೆಲ್ ತಲುಪಿದ ಡಿಕೆಶಿ: ಪೊಲೀಸರ ತಡೆ

ಪ್ರಗತಿವಾಹಿನಿ ಸುದ್ದಿ, ಮುಂಬೈ:

ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ ಅತೃಪ್ತರ ಮನವೊಲಿಸಲು ಮುಂಬೈಗೆ ತೆರಳಿದ್ದು, ಹೊಟೆಲ್ ಪ್ರವೇಶಕ್ಕೆ ಪ್ರಯತ್ನಿಸುತ್ತಿದ್ದಾರೆ.

ಇಂದು ಬೆಳಗ್ಗೆ ಡಿ.ಕೆ.ಶಿವಕುಮಾರ್, ಜಿ.ಟಿ.ದೇವೇಗೌಡ, ಜೆಡಿಎಸ್ ನ ಶಿವಲಿಂಗೇ ಗೌಡ ಮೊದಲಾದವರು ಮುಂಬೈಗೆ ತೆರಳಿದ್ದಾರೆ.

ಹೊಟೆಲ್ ಎದುರು ಡಿಕೆಶಿ ಗೋ ಬ್ಯಾಕ್, ಕುಮಾರಸ್ವಾಮಿ ಗೋ ಬ್ಯಾಕ್, ನಾರಾಯಣ ಗೌಡ ಜಿಂದಾಬಾದ್ ಎಂದು ಕೂಗುತ್ತ ನೂರಾರು ಜನಪ್ರತಿಭಟಿಸುತ್ತಿದ್ದಾರೆ.

Home add -Advt

ಪೊಲೀಸರು ಸಹ ಡಿಕೆಶಿ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಒಳಗೆ ಹೋಗದಂತೆ ಮನವೊಲಿಸುತ್ತಿದ್ದಾರೆ.

ನಾನು ಹೊಟೆಲ್ ನಲ್ಲಿ ರೂಂ ಬುಕ್ ಮಾಡಿದ್ದೇನೆ. ನನ್ನ ಸ್ನೇಹಿತರು ಇಲ್ಲಿದ್ದಾರೆ. ಅವರೊಂದಿಗೆ ಮಾತನಾಡಲು ಬಂದಿದ್ದೇನೆ ಎಂದು ಶಿವಕುಮಾರ ಹೇಳಿದರು.

ಪೊಲೀಸರು ತಡೆದಿದ್ದರಿಂದ ಇಡೀದಿನ ಅಲ್ಲೇ ಕಾಯುವುದಾಗಿ ಹೇಳಿದ್ದಾರೆ.

ಬಿಜೆಪಿಯವರು ನಮ್ಮವರನ್ನು ಕಿಡ್ನ್ಯಾಪ್ ಮಾಡಿದ್ದು ಅವರ ಅಭಿಪ್ರಾಯ ಪಡೆದು ಹೋಗುತ್ತೇವೆ ಎಂದು ಶಿವಲಿಂಗೇಗೌಡ ಹೇಳಿದರು.

ಈ ಮಧ್ಯೆ ತಮಗೆ ಬೆದರಿಕೆ ಇರುವುದಾಗಿ ಅತೃಪ್ತ ಶಾಸಕರು ದೂರು ನೀಡಿದ್ದಾರೆ.

Related Articles

Back to top button