ಘಟನಾ ಸ್ಥಳಕ್ಕೆ ಎನ್ ಐಎ ಭೇಟಿ: ಗಾಯಾಳುಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ
ಪ್ರಗತಿವಾಹಿನಿ ಸುದ್ದಿ: ರಾಜಧಾನಿ ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿದೆ.
ಮಧ್ಯಾಹ್ನ 1 ಗಂಟೆಯ ಸಮಯದಲ್ಲಿ ಹೋಟೆಲ್ ನ ಕೈ ತೊಳೆಯುವ ಜಾಗದಲ್ಲಿ ಈ ಸ್ಫೋಟ ಸಂಭವಿಸಿದೆ. ಕೆಫೆಯಲ್ಲಿ 10 ಸೆಕೆಂಡ್ ಗಳಲ್ಲಿ ಎರಡು ಬಾರಿ ಸ್ಫೋಟ ಸಂಭವಿಸಿದೆ. ಘಟನಾ ಸ್ಥಳದಲ್ಲಿ ಕೆಲ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿವೆ.
ಘಟನೆಯಲ್ಲಿ ಓರ್ವ ಮಹಿಳೆ ಸೇರಿ ೯ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಶೇ.40ರಷ್ಟು ಭಾಗ ಸುಟ್ಟು ಹೋಗಿದೆ ಎಂದು ತಿಳಿದುಬಂದಿದೆ.
ಇನ್ನು ಘಟನಾ ಸ್ಥಳಕ್ಕೆ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ, ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣ ಭಯೋತ್ಪಾದನೆಯ ಕೃತ್ಯದ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳಕ್ಕೆ ಎನ್ ಐಎ (ರಾಷ್ಟ್ರೀಯ ತನಿಖಾ ದಳ) ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಇನ್ನು ಗಾಯಾಳುಗಳ ಬಗ್ಗೆ ಮಾಹಿತಿ ನೀಡಿರುವ ಬ್ರೂಕ್ ಫಿಲ್ಡ್ ಆಸ್ಪತ್ರೆಯ MD ಪ್ರದೀಪ್ ಕುಮಾರ್, ಆಸ್ಪತ್ರೆಗೆ ದಾಅಖಲಾಗಿರುವ ಒಬ್ಬರು ಮಹಿಳೆಗೆ ೪೦% ಬರ್ನ್ ಆಗಿದೆ. ಇಬ್ಬರ ಸ್ಥಿತಿ ನಾರ್ಮಲ್ ಇದೆ
ಮೂವರಲ್ಲಿ ಯಾರಿಗೂ ಜೀವಕ್ಕೆ ತೊಂದ್ರೆಯಿಲ್ಲ ೪೦% ಸುಟ್ಟಗಾಯ ಆಗಿರೋ ಮಹಿಳೆಗೆ ಸರ್ಜರಿ ಬೇಕಾಗಿದೆ. ಮಹಿಳೆಯ ಕಿವಿಯ ಭಾಗಕ್ಕೆ ಪೆಟ್ಟಾಗಿದೆ. ಗ್ಲಾಸ್ ಪೀಸಸ್, ಚರ್ಮದೊಳಗೆ ಸೇರಿರುವ ಅನುಮಾನವಿದೆ. ಸಿಟಿ ಸ್ಕ್ಯಾನ್ ಮಾಡಬೇಕಾಗುತ್ತದೆ.
ಲೋ ಇಂಟೆನ್ಸಿ ಬ್ಲಾಸ್ಟ್ ತರ ಕಾಣಿಸ್ತಿದೆ. ಬಂದಿದ್ದ ಕೂಡಲೇ ಡ್ರೇಸ್ ಮೆಟರಿಯಲ್ ನ ತೆಗೆದಿದ್ದೇವೆ. ಇದನ್ನು FSL ಅವ್ರಿಗೆ ಕೊಡುತ್ತೆವೆ ಎಂದು ತಿಳಿಸಿದ್ದಾರೆ.
ಗಾಯಗೊಂಡವರ ವಿವರ :
೧) ಫಾರಿಖ್ ೧೯ ವರ್ಷ.. ಹೋಟೆಲ್ ಸಿಬ್ಬಂಧಿ
೨) ದೀಪಾಂಶು ೨೩ ವರ್ಷ. ಅಮೇಜನ್ ಕಂಪನಿಯ ಸಿಬ್ಬಂಧಿ
೩) ಸ್ವರ್ಣಾಂಬ ೪೦ ವರ್ಷ.. ೪೦% ಸುಟ್ಟ ಗಾಯ- ಬ್ರೂಕ್ ಫಿಲ್ಡ್ ಆಸ್ಪತ್ರೆಯ ಚಿಕಿತ್ಸೆ
೪) ಮೋಹನ್ ೪೧ ವರ್ಷ..
೫) ನಾಗಶ್ರೀ ೩೫ ವರ್ಷ
೬) ಮೋಮಿ ೩೦ ವರ್ಷ
೭) ಬಲರಾಮ್ ಕೃಷ್ಣನ್ ೩೧
೮) ನವ್ಯಾ ೨೫ ವರ್ಷ
೯ ) ಶ್ರೀನಿವಾಸ್ ೬೭ ವರ್ಷ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ