Kannada NewsKarnataka NewsLatest

ರಣಕುಂಡೆ ಮರ್ಡರ್ ಕೇಸ್: ನಾಲ್ವರ ಆರೆಸ್ಟ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಣಕುಂಡೆಯಲ್ಲಿ ಯುವಕನನ್ನು ಕೊಲೆ ಮಾಡಿ ಶವವನ್ನು ಎಸೆದು ಹೋಗಿದ್ದ ಆರೋಪದಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಪಾಟೀಲ ಗಲ್ಲಿಯ 31 ವರ್ಷದ ಪ್ರಮೋದ ಸಹದೇವ ಪಾಟೀಲ, ಪಾಟೀಲ ಗಲ್ಲಿಯ 28 ವರ್ಷದ ಶ್ರೀಧರ ಸಹದೇವ ಪಾಟೀಲ, ಪಾಟೀಲ ಗಲ್ಲಿಯ 21 ವರ್ಷದ ಮಹೇಂದ್ರ ಯಲ್ಲಪ್ಪ ಕಂಗ್ರಾಳಕರ್, ಕಿಣಿಯೆದ 33 ವರ್ಷದ ಬೊಮಾನಿ ಕೃಷ್ಣಾ ಡೋರ್ಕೆ ಬಂಧಿತರು.

Home add -Advt

ಏಪ್ರಿಲ್ 2ರ ರಾತ್ರಿ 30 ವರ್ಷದ ನಾಗೇಶ್ ಪಾಟೀಲ್  ಎಂಬ ಯುವಕನನ್ನು ಬರ್ಬರವಾಗಿ ಹತ್ಯೆಗೈದು ಬಳಿಕ ಮನೆ ಬಳಿ ಶವವನ್ನು ಬಿಸಾಕಿ ಹೋಗಲಾಗಿತ್ತು.

ಯುವಕನ ಮನೆಗೆ ಬಂದು ಗಲಾಟೆ ಮಾಡಿದ್ದ ದುಷ್ಕರ್ಮಿಗಳ ಗುಂಪು ಬಳಿಕ ಆತನನ್ನು ಎಳೆದೊಯ್ದಿದ್ದರು. ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿದ್ದು, ಬಳಿಕ ಶವವನ್ನು ಮನೆ ಬಳಿ ಬಿಸಾಕಿ ಹೋಗಿದ್ದರು. ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬೆಳಗಾವಿ: ಯುವಕನನ್ನು ಕೊಲೆಗೈದು ಶವವನ್ನು ಮನೆ ಬಳಿ ಬಿಸಾಕಿ ಹೋದ ದುಷ್ಕರ್ಮಿಗಳು

Related Articles

Back to top button