
ಪ್ರಗತಿವಾಹಿನಿ ಸುದ್ದಿ : ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರನ್ಯಾ ರಾವ್ ಜೈಲಿನಲ್ಲಿ ಕುಳಿತೆ ಡಿಆರ್ ಐ ಎಡಿಜಿಗೆ ಸುದೀರ್ಘ ಪತ್ರ ಬರೆದಿದ್ದಾರೆ.
ನನ್ನ ಮೇಲೆ ಸುಳ್ಳು ಕೇಸ್ ದಾಖಲು ಮಾಡಿದ್ದಾರೆ. 14 ಕೆಜಿ ಚಿನ್ನ ತಂದಿರೋದಾಗಿ ಸುಳ್ಳು ಕೇಸ್ ದಾಖಲು ಮಾಡಿದ್ದಾರೆ. ಅಧಿಕಾರಿಗಳು ನನಗೆ ಮಾತನಾಡೋದಕ್ಕೆ ಯಾವುದೇ ಅವಕಾಶ ಕೊಟ್ಟಿಲ್ಲ. 10-15 ಸಲ ನನ್ನ ಮೇಲೆ ಅಧಿಕಾರಿಗಳು ಕೈ ಮಾಡಿದ್ದಾರೆ. ಈ ಪ್ರಕರಣದಲ್ಲಿ ನಾನು ಅಮಾಯಕಿ. ಅಧಿಕಾರಿಗಳು ನನಗೆ ಹೊಡೆದಿದಕ್ಕೆ ಕಾರಣ ನೀಡಿಲ್ಲ. ನನಗೆ ಹೊಡೆದ ಅಧಿಕಾರಿಗಳನ್ನ ನಾನು ಗುರುತಿಸಬಲ್ಲೇ. ನನಗೆ ಹೊಡೆದು ಸ್ಟೇಟ್ ಮೆಂಟ್ ಗೆ ಸಹಿ ಮಾಡಿಸಿಕೊಂಡಿದ್ದಾರೆ. ಸಹಿ ಮಾಡಲಿಲ್ಲ ಅಂದ್ರೆ ತಂದೆ ಹೆಸ್ರು ಜೊತೆಗೆ ಎಕ್ಸಪೋಸ್ ಮಾಡ್ತೀವಿ ಅಂತ ಬೆದರಿಸಿದ್ರು. ನನಗೆ ಮಾನಸಿಕವಾಗಿ ದೈಹಿಕವಾಗಿ ಹಿಂಸೆ ಕೊಟ್ಟಿದ್ದಾರೆ. 40 ವೈಟ್ ಪೇಪರ್ ಮೇಲೆ ಸಹಿ ಮಾಡಿಸಿಕೊಂಡಿದ್ದಾರೆ. ಟೈಪ್ ಮಾಡಿದ ಕೆಲವಂದಿಷ್ಟು ದಾಖಲೆ ಮೇಲೆ ಮಾಡಿಸಿಕೊಂಡಿದ್ದಾರೆ. ಕೋರ್ಟ್ ಗೆ ಹಾಜರು ಪಡಿಸುವ ಮುನ್ನ ನನಗೆ ನಿದ್ದೆ ಮಾಡಲು ಬಿಟ್ಟಿಲ್ಲ, ಸರಿಯಾಗಿ ಊಟ ಕೊಟ್ಟಿಲ್ಲ. ಈ ಪ್ರಕರಣದಲ್ಲಿ ನನ್ನ ತಪ್ಪಿಲ್ಲ. ನನ್ನನ್ನು ಅನಗತ್ಯವಾಗಿ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ರನ್ಯಾ ಡಿಆರ್ ಐ, ಎಡಿಜಿಗೆ ಪತ್ರ ಬರೆದಿದ್ದಾರೆ.