Latest

ಐಪಿಎಲ್ ನಲ್ಲಿ ಒಂದೇ ತಂಡಕ್ಕೆ ಅತೀ ಹೆಚ್ಚು ಪಂದ್ಯ ಆಡಿದ ಆಟಗಾರರು ಯಾರು ಗೊತ್ತೆ ?

ಪ್ರಗತಿವಾಹಿನಿ ಸುದ್ದಿ; ಮುಂಬೈ: ಖ್ಯಾತ ಆಟಗಾರ ಎಂ. ಎಸ್. ಧೋನಿ ಐಪಿಎಲ್ ನಲ್ಲಿ ಬುಧವಾರ ಆರ್ ಸಿಬಿ ವಿರುದ್ಧ ಪಂದ್ಯ ಆಡುವ ಮೂಲಕ ಐಪಿಎಲ್ ನಲ್ಲಿ ಒಂದೇ ತಂಡದ ಪರ ಅತೀ ಹೆಚ್ಚು ಪಂದ್ಯ ಆಡಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಅವರು ಸಿಎಸ್ ಕೆ ಪರ ಐಪಿಎಲ್ ನಲ್ಲಿ ಈವರೆಗೆ ಒಟ್ಟು 200 ಪಂದ್ಯಗಳನ್ನು ಆಡಿದ್ದಾರೆ.

ಆದರೆ ಐಪಿಎಲ್ ನಲ್ಲಿ ಒಂದೇ ಫ್ರಾಂಚೈಸಿ ಪರ ಅತೀ ಹೆಚ್ಚು ಪಂದ್ಯ ಆಡಿದ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೋಹ್ಲಿ ಹೆಸರಿನಲ್ಲಿದೆ. ಕೋಹ್ಲಿ ಆರ್ ಸಿಬಿ ಪರ ಈವರೆಗೆ ಒಟ್ಟು 218 ಪಂದ್ಯಗಳನ್ನು ಆಡಿದ್ದಾರೆ.

Home add -Advt

ಇನ್ನು ಐಪಿಎಲ್ ನಲ್ಲಿ ಒಂದೇ ಫ್ರಾಂಚೈಸಿ ಪರ ಅತೀ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರ ಪೈಕಿ ಮೂರನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ನ ಕೀರನ್ ಪೋಲ್ಲಾರ್ಡ್ ಇದ್ದಾರೆ. ಅವರು ಎಂಐ ಪರ ಈವರೆಗೆ ಒಟ್ಟು 187 ಪಂದ್ಯಗಳನ್ನು ಆಡಿದ್ದಾರೆ.

3 ಗಿನ್ನಿಸ್ ದಾಖಲೆ ಬರೆದ ವಿಶ್ವದ ಅತೀ ಎತ್ತರದ ಮಹಿಳೆ

Related Articles

Back to top button