Kannada NewsKarnataka NewsLatest
ಅತ್ಯಾಚಾರವೆಸಗಿ ಕೊಲೆ ಆರೋಪ ಸಾಬೀತು, ಶಿಕ್ಷೆ ಏನು?
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ವಿಧವೆಗೆ ಜನತಾ ಮನೆ ಕೊಡಿಸುವುದಾಗಿ ಹೇಳಿ ನಂಬಿಸಿ, ಅತ್ಯಾಚಾರ ಮಾಡಿ ಕೊಲೆಗೈದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ನ್ಯಾಯಾಲಯ ಅಪರಾಧಿ ಎಂದು ಘೋಷಿಸಿದೆ.
ನಿಪ್ಪಾಣಿ ಬಳಿಯ ಖಡಕಲಾಟದ ರಮೇಶ ಅಲಿಯಾಸ್ ರಾಮಾ ಲಕ್ಷ್ಮಣ ಜಾಧವ ಅಪರಾಧಿ. ಬುಧವಾರ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.
ರಮೇಶ್ 2016ರಲ್ಲಿ ಅದೇ ಊರಿನ ವಿಧವೆಗೆ ಮನೆ ಕೊಡಿಸುವುದಾಗಿ ನಂಬಿಸಿ ಸ್ಥಳೀಯ ಕಾಲೇಜಿನ ಬಳಿ ಕರೆದುಕೊಂಡು ಹೋಗಿ ಬಲಾತ್ಕಾರ ಮಾಡಿದ್ದ.
ಆಕೆ ಮನೆಯಲ್ಲಿ ಹೇಳುವುದಾಗಿ ಬೆದರಿಸಿದಾಗ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದ. ಪ್ರಕರಣ ದಾಖಲಿಸಿದ್ದ ನಿಪ್ಪಾಣಿ ಪೊಲೀಸರು ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದ್ದರು.
ಕಿರಣ ಪಾಟೀಲ ಸರಕಾರದ ಪರ ವಾದಿಸಿದ್ದರು. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿ.ಬಿ.ಸೂರ್ಯವಂಶಿ ತೀರ್ಪು ನೀಡಿದರು.




