ಪ್ರಗತಿವಾಹಿನಿ ಸುದ್ದಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಅಪರಾಧಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಬೆಳಗಾವಿ ಜಿಲ್ಲಾ ಪೋಕ್ಸೋ ನ್ಯಾಯಾಲಯ ಆದೇಶ ಹೊರಡಿಸಿದೆ.
ಅಜೀತ ಸಹದೇವ ಪಾಟೀಲ (ವಯಸ್ಸು 27 ವರ್ಷ ಸಾ ಮೋರಬ ತಾ: ರಾಯಬಾಗ ಜಿಲ್ಲಾ ಬೆಳಗಾವಿ) ಇವನು ನೊಂದ ಬಾಲಕಿಯ ಮನೆಗೆ ಬಂದು ಬಾಲಕಿಯೊಂದಿಗೆ ಸಲುಗೆಯಿಂದ ಮಾತನಾಡಿಸುತ್ತಿದ್ದನು. ಅವಳ ಮನೆಯಲ್ಲಿದ್ದ 3000 ರೂ. ತೆಗೆದುಕೊಂಡು ಮೈ ಮೇಲೆ ಇದ್ದ ಕಿವಿಯ ಬಂಗಾರ ಅರ್ಧ ತೊಲೆಯ ಓಲೆ ತೆಗೆದುಕೊಂಡು, ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ.
ನಂತರ ಅವಳ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಹೋಗಿ ನಾನು ನಿನ್ನನ್ನು ಮದುವೆ ಆಗುತ್ತೇನೆ ಎಂದು ಹೇಳಿ ನಂಬಿಸಿ ಹಲವಾರು ಬಾರಿ ಅತ್ಯಾಚಾರ ಮಾಡಿದ್ದ. ತನಿಖಾಧಿಕಾರಿಯಾದ ಕೆ. ಎಸ್. ಹಟ್ಟಿ ಹೆಚ್ಚುವರಿ ಜಿಲ್ಲಾ & ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ನ್ಯಾಯಾಲಯ-01ಕ್ಕೆ ದೋಷಾರೋಪಣಿ ಪಟ್ಟಿಯನ್ನು ಸಲ್ಲಿಸಿದ್ದರು.
ನ್ಯಾಯಾಧೀಶರಾದ ಸಿ ಎಮ್ ಪುಷ್ಪಲತಾ ಇವರು ಪ್ರಕರಣವನ್ನು ವಿಚಾರಣೆ ಮಾಡಿ, ಒಟ್ಟು 35 ಸಾಕ್ಷಿಗಳ ವಿಚಾರಣೆ ಮೇಲಿಂದ ಹಾಗೂ 46 ದಾಖಲೆಗಳು, ಹಾಗೂ ಮುದ್ದೆಮಾಲಗಳ ಆಧಾರದ ಮೇಲಿಂದ ಆರೋಪಿ ಅಜೀತ ಸಹದೇವ ಪಾಟೀಲ (ವಯಸ್ಸು 27 ವರ್ಷ ಸಾ ಮೋರಬ ತಾ: ರಾಯಬಾಗ ಜಿಲ್ಲಾ ಬೆಳಗಾವಿ) ಮೇಲಿನ ಆರೋಪಣೆಗಳು ಸಾಬೀತಾಗಿವೆ ಎಂದು ತೀರ್ಪು ನೀಡಿ, ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ತೀಕ್ಷೆ & ರೂ 10,000/- ರೂಪಾಯಿ ದಂಡ ವಿಧಿಸಿ ಪ್ರಕರಣದ ತೀರ್ಪು ಪ್ರಕಟಿಸಿದ್ದಾರೆ.
ಮತ್ತು ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ರೂ 1 ಲಕ್ಷ ರೂ. ಪರಿಹಾರ ಧನವನ್ನು ಪಡೆಯಲು ನ್ಯಾಯಾಲಯ ಆದೇಶಿಸಿದೆ. ಪ್ರಕರಣದಲ್ಲಿ ಸರಕಾರದ ಪರವಾಗಿ ಎಲ್. ವಿ ಪಾಟೀಲ, ವಿಶೇಷ ಸರ್ಕಾರಿ ಅಭಿಯೋಜಕರು, ಬೆಳಗಾವಿ ಇವರು ಹಾಜರಾಗಿ ಪ್ರಕರಣವನ್ನು ನಡೆಸಿ ಹಾಗೂ ವಾದ ಮಂಡಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ