Kannada NewsKarnataka NewsLatest
*ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ; ಗರ್ಭವತಿಯನ್ನಾಗಿಸಿದ ರೈತ ಮುಖಂಡ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಆಕೆಯನ್ನು ಗರ್ಭವತಿಯನ್ನಾಗಿ ಮಾಡಿದ ಪ್ರಕರಣ ಬೆಳಕಿಗೆ ಬಂದಿದ್ದು, ಜಿಲ್ಲಾ ರೈತ ಸಂಘದ ಅಧ್ಯಕ್ಷನನ್ನು ಪೊಲೀಸರು ಬಂಧಿಸಿದ್ದಾರೆ.
ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಈ ಘಟನೆ ನಡೆದಿದೆ. ರೈತ ಸಂಘದ ಜಿಲ್ಲಾಧ್ಯಕ್ಷ ರಾಮೇಗೌಡ ಬಂಧಿತ ಆರೋಪಿ. ರಾಮೇಗೌಡ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಗರ್ಭವತಿಯಾನಿ ಮಾಡಿದ್ದಾನೆ.
ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬೆದರಿಕೆಯೊಡ್ಡಿ ವಿಷಯ ಯಾರಿಗೂ ಬಾಯ್ಬಿಡದಂತೆ ಧಮ್ಕಿ ಹಾಕಿದ್ದ ಎನ್ನಲಾಗಿದೆ. ಬಾಲಕಿ ಮನೆಯಲ್ಲಿಯೂ ವಿಷಯ ಹೇಳದೆ ಸುಮ್ಮನಿದ್ದಳು, ಆದರೆ ಗರ್ಭಿಣಿಯಾಗುತ್ತಿದ್ದಂತೆ ಪೋಷಕರ ಬಳಿ ಬಾಯ್ಬಿಟ್ಟಿದ್ದಾಳೆ. ಸಂತ್ರಸ್ತ ಬಾಲಕಿ ನಾಲ್ಕು ತಿಂಗಳ ಗರ್ಭಿಣಿ.
ಸಂತ್ರಸ್ತೆಯ ಕುಟುಂಬ ನೀಡಿದ ದೂರಿನ ಹಿನೆಲೆಯಲ್ಲಿ ಬಂಗಾರಪೇಟೆ ಠಾಣೆ ಪೊಲೀಸರು ಪೋಕ್ಸೋ ಕೇಸ್ ದಾಖಲಿಸಿಕೊಂಡು, ರಾಮೇಗೌಡನನ್ನು ಬಂಧಿಸಿದ್ದಾರೆ.



