Belagavi NewsBelgaum NewsCrimeKannada NewsKarnataka NewsLatestNationalPolitics

*ಹಗ್ಗದಿಂದ ಕಟ್ಟಿಹಾಕಿ ಬಾಲಕಿ ಮೇಲೆ ಅತ್ಯಾಚಾರ: ಆರೋಪಿಗೆ 30 ವರ್ಷ ಕಠಿಣ ಶಿಕ್ಷೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸುಗಿದ ಕಾಮುಕನಿಗೆ ಬೆಳಗಾವಿಯ ಪೋಕ್ಸೊ ನ್ಯಾಯಾಲಯ 30 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

ಬೆಳಗಾವಿ ತಾಲ್ಲೂಕಿನ ಬಿ.ಕೆ.ಕಗ್ರಾಳಿಯ ರುತೇಶ ಅನಿಲ ಬೋಸಲೆ (22) ಶಿಕ್ಷೆಗೆ ಒಳಗಾದವ. 2025ರ ಏಪ್ರಿಲ್‌ 10ರಂದು ಬಾಲಕಿಗೆ ಲಡ್ಡು ಕೋಡುತ್ತೆನೆ ಬಾ ಎಂದು ಪುಸಲಾಯಿಸಿ ಮನೆಗೆ ಕರೆದುಕೊಂಡು, ಹಗ್ಗದಿಂದ ಕಟ್ಟಿಹಾಕಿ ಹೋಗಿ ಅತ್ಯಾಚಾರ ಎಸಗಿದ್ದ. 

ಬಳಿಕ ಈ ವಿಷಯ ಯಾರಿಗಾದರೂ ಹೇಳಿದರೆ ಕೊಲೆ ಮಾಡುತ್ತೇನೆ, ನಿನ್ನಂತೆಯೇ ನಿನ್ನ ಅಕ್ಕನಿಗೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ. ಎರಡನೇ ಬಾರಿ ಬಾಲಕಿಯನ್ನು ಕರೆದಾಗ ಅವಳು ಹೋಗಲಿಲ್ಲ. ಆಗ ಆರೋಪಿ ಬಾಲಕಿಯ ಕೂದಲು ಹಿಡಿದುಕೊಂಡು ಎಳೆದುಕೊಂಡು ಹೋಗಿ ಇಟ್ಟಿಗೆಯಿಂದ ಹೊಡೆದಿದ್ದ. ಈ ಬಗ್ಗೆ ತನಿಖೆ ನಡೆಸಿದ್ದ ತನಿಖಾಧಿಕಾರಿ ಸುರೇಶ ಪಿ. ಶಿಂಗಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 

ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ಅವರು ಶಿಕ್ಷೆ ಪ್ರಕಟಿಸಿದ್ದಾರೆ.ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ ಪಾಟೀಲ ವಾದ ಮಂಡಿಸಿದ್ದರು. ಅತ್ಯಾಚಾರಕ್ಕೆ ಒಳಗಾದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ₹6 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ.

Home add -Advt

Related Articles

Back to top button