ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಸಾಮಾಜಿಕ ಜಾಲತಾಣಗಳ ಮೂಲಕ ಅಪ್ರಾಪ್ತ ಯುವತಿಯೋರ್ವಳನ್ನು ಪರಿಚಯ ಮಾಡಿಕೊಂಡು ಆಕೆಯನ್ನು ಪ್ರೀತಿಸಿ ಮದುವೆಯಾಗುವುದಾಗಿ ಹೇಳಿ ನಂಬಿಸಿದ ಭಾರತೀಯ ಸೈನ್ಯದ ಯೋಧನೋರ್ವ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿ ಬಳಿಕ ವಂಚಿಸಿ ತಲೆಮರೆಸಿಕೊಂಡಿದ್ದಾನೆ ಎಂದು ಯೋಧನ ವಿರುದ್ಧ ಖಾನಾಪುರ ಪೊಲೀಸ್ ಠಾಣೆಯಲ್ಲಿ ಭಾನುವಾರ ದೂರು ದಾಖಲಾಗಿದೆ.
ತಾಲ್ಲೂಕಿನ ಭಂಡರಗಾಳಿ ನಿವಾಸಿ ಮತ್ತು ಸಧ್ಯ ಪಂಜಾಬ್ ರಾಜ್ಯದಲ್ಲಿ ಭಾರತೀಯ ಸೈನ್ಯದ
ಸೈನಿಕನಾಗಿ ಕಾರ್ಯನಿರ್ವಹಿಸುತ್ತಿರುವ ಯೋಧ ಮದನ್ ದಿನಕರ ಪಾಟೀಲ ಪ್ರಕರಣದ ಆರೋಪಿ
ಎನ್ನಲಾಗಿದೆ. ಕಳೆದ ಹಲವು ವರ್ಷಗಳಿಂದ ಭಾರತೀಯ ಸೈನ್ಯದಲ್ಲಿ ಸೇವೆಯಲ್ಲಿರುವ ಮದನ್
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಧಾರವಾಡದ ಯುವತಿಯ ಪರಿಚಯ ಮಾಡಿಕೊಂಡಿದ್ದ.
ಸೈನಿಕನಾಗಿ ಕಾರ್ಯನಿರ್ವಹಿಸುತ್ತಿರುವ ಯೋಧ ಮದನ್ ದಿನಕರ ಪಾಟೀಲ ಪ್ರಕರಣದ ಆರೋಪಿ
ಎನ್ನಲಾಗಿದೆ. ಕಳೆದ ಹಲವು ವರ್ಷಗಳಿಂದ ಭಾರತೀಯ ಸೈನ್ಯದಲ್ಲಿ ಸೇವೆಯಲ್ಲಿರುವ ಮದನ್
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಧಾರವಾಡದ ಯುವತಿಯ ಪರಿಚಯ ಮಾಡಿಕೊಂಡಿದ್ದ.
ನಿತ್ಯ ಮೊಬೈಲ್ ಮೂಲಕ ಆಕೆಯೊಂದಿಗೆ ಗಂಟೆಗಟ್ಟಲೇ ಮಾತಾಡುತ್ತಲೇ ತನ್ನ ಪರಿಚಯವನ್ನು
ಪ್ರೇಮವಾಗಿ ಪರಿವರ್ತಿಸಿಕೊಂಡಿದ್ದ. ಇತ್ತೀಚೆಗೆ ರಜೆಯ ನಿಮಿತ್ತ ಸ್ವಗ್ರಾಮಕ್ಕೆ
ಬಂದಿದ್ದ ಮದನ್ ಯುವತಿಯ ಬಳಿ ತೆರಳಿ ಆಕೆಯ ಜೊತೆ ಸುತ್ತಾಡಿದ್ದ. ಆಕೆಯ ಜೊತೆ ಸಂಪರ್ಕ
ಬೆಳೆಸಿ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ.
ಪ್ರೇಮವಾಗಿ ಪರಿವರ್ತಿಸಿಕೊಂಡಿದ್ದ. ಇತ್ತೀಚೆಗೆ ರಜೆಯ ನಿಮಿತ್ತ ಸ್ವಗ್ರಾಮಕ್ಕೆ
ಬಂದಿದ್ದ ಮದನ್ ಯುವತಿಯ ಬಳಿ ತೆರಳಿ ಆಕೆಯ ಜೊತೆ ಸುತ್ತಾಡಿದ್ದ. ಆಕೆಯ ಜೊತೆ ಸಂಪರ್ಕ
ಬೆಳೆಸಿ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ.
ನಂತರ ಯುವತಿ ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರಿದಾಗ ಯುವತಿಯ ಸಂಪರ್ಕದಿಂದ ದೂರವುಳಿದು ತನ್ನ ರಜೆ ಮುಗಿದ ಕಾರಣ ಯುವತಿಗೆ ತಿಳಿಸದೇ ಮರಳಿ ಕರ್ತವ್ಯಕ್ಕೆ ತೆರಳಿದ್ದ. ಇದರಿಂದ ಮನನೊಂದ ಯುವತಿ ಖಾನಾಪುರ ಪೊಲೀಸ್ ಠಾಣೆಯಲ್ಲಿ ಮದನ್ ವಿರುದ್ಧ ಐಪಿಸಿ 376, 420 ಮತ್ತು ಲೈಂಗಿಕ
ದೌರ್ಜನ್ಯದಿಂದ ಮಕ್ಕಳ ರಕ್ಷಣಾ ಕಾಯ್ದೆ (ಪೋಕ್ಸೋ)2012ರಡಿ ದೂರು ದಾಖಲಿಸಿದ್ದಾಳೆ
ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.
ದೌರ್ಜನ್ಯದಿಂದ ಮಕ್ಕಳ ರಕ್ಷಣಾ ಕಾಯ್ದೆ (ಪೋಕ್ಸೋ)2012ರಡಿ ದೂರು ದಾಖಲಿಸಿದ್ದಾಳೆ
ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.
ಈತನ ವಿರುದ್ಧ ಯುವತಿ ನೀಡಿದ ದೂರಿನಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು
ಆರೋಪಿಯನ್ನು ಬಂಧಿಸಲು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೂಲಕ ಭಾರತೀಯ ಸೈನ್ಯದ ಹಿರಿಯ ಅಧಿಕಾರಿಗಳ ಅನುಮತಿಗಾಗಿ ಪತ್ರ ವ್ಯವಹಾರ ಕೈಗೊಂಡಿದ್ದಾರೆ
ಎನ್ನಲಾಗಿದೆ.
ಆರೋಪಿಯನ್ನು ಬಂಧಿಸಲು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೂಲಕ ಭಾರತೀಯ ಸೈನ್ಯದ ಹಿರಿಯ ಅಧಿಕಾರಿಗಳ ಅನುಮತಿಗಾಗಿ ಪತ್ರ ವ್ಯವಹಾರ ಕೈಗೊಂಡಿದ್ದಾರೆ
ಎನ್ನಲಾಗಿದೆ.
ಪ್ರಕರಣದ ತನಿಖೆ ಪ್ರಾರಂಭಿಸಿರುವ ಪೊಲೀಸರು ಸೋಮವಾರ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಸಂತ್ರಸ್ತ ಯುವತಿಯ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದು, ಆಕೆಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಒಪ್ಪಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ