9 ಸಾವಿರ ಕೋಳಿಗಳ ಸಾಮೂಹಿಕ ನಾಶ

ಪ್ರಗತಿವಾಹಿನಿ ಸುದ್ದಿ; ಕೋಲಾರ: ಕೊರೋನಾ ವೈರಸ್​ ಹರಡುತ್ತಿದೆ ಎಂಬ ವದಂತಿ ಹಿನ್ನೆಲೆಯಲ್ಲಿ 9 ಸಾವಿರ ಕೋಳಿಗಳನ್ನು ಸಾಮೂಹಿಕವಾಗಿ ನಾಶ ಮಾಡಿರುವ ಘಟನೆ ಕೋಲಾರಜಿಲ್ಲೆ ಬಂಗಾರಪೇಟೆ ತಾಲೂಕಿನ ಮಾಗೊಂದಿ ಗ್ರಾಮದಲ್ಲಿ ನಡೆದಿದೆ.

ಕೋಳಿಯಿಂದ ಕೊರೋನಾ ವೈರಸ್​ ಹರಡುತ್ತಿದೆ ಎಂಬ ವದಂತಿ ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಾದ್ಯಂತ ಹರಿದಾಡುತ್ತಲೇ ಇದೆ. ಹೀಗಾಗಿ ಕೋಳಿ ಮಾಂಸದ ಮಾರಾಟದಲ್ಲಿ ಭಾರೀ ಕುಸಿತ ಉಂಟಾಗಿದ್ದು, ಬೆಲೆಯೂ 60 ರಿಂದ 90 ರೂ.ಗೆ ಇಳಿಕೆ ಕಂಡಿದೆ. ಪರಿಣಾಮ ಕೋಳಿ ಸಾಕಾಣೆ ಮಾಡುವವರು ಸಂಕಷ್ಟಕ್ಕೆ ಒಳಗಾಗುವಂತಾಗಿದೆ.

Home add -Advt

ಹೀಗಾಗಿ ಕೋಳಿಗಳು ಮಾರಾಟವಾದರೂ ಬೆಲೆ ಇಲ್ಲದೆ ನಷ್ಟ ಉಂಟಾಗುವುದು ಖಚಿತವಾಗಿದ್ದು, ಕಂಪೆನಿಯಿಂದಲೇ ಸೂಚನೆ ಬಂದಿರುವ ಹಿನ್ನೆಲೆಯಲ್ಲಿ ಮಾಗೊಂದಿ ಗ್ರಾಮದ ಹೇಮಂತ್ ಎನ್ನುವವರು ತಮ್ಮ ಕೋಳಿ ಫಾರಂನಲ್ಲಿರುವ ಎಲ್ಲಾ ಕೋಳಿಗಳಿಗೂ ಕೆಮಿಕಲ್ ಆಹಾರ ನೀಡಿ ನಾಶ ಮಾಡಿದ್ದಾರೆ.

Related Articles

Back to top button