National

*ವೈದ್ಯೆ ಮೇಲೆ ಸಹೋದ್ಯೋಗಿ ವೈದ್ಯನಿಂದ ಅತ್ಯಾಚಾರ*

ಪ್ರಗತಿವಾಹಿನಿ ಸುದ್ದಿ: ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯೇ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ.

ವೈದ್ಯಕೀಯ ಕಾಲೇಜಿನ ಮಹಿಳಾ ಹಾಸ್ಟೇಲ್ ನಲ್ಲಿ ವಾಸವಾಗಿದ್ದ ವೈದ್ಯೆಯನ್ನು ಆರೋಪಿ ತನ್ನ ಹಾಸ್ಟೇಲ್ ಗೆ ಬರುವಂತೆ ಕರೆಸಿಕೊಂಡು ನೀಚ ಕೃತ್ಯವೆಸಗಿದ್ದಾನೆ. ಸಂತ್ರಸ್ತ ವೈದ್ಯೆ ದೂರು ನೀಡಿರುವ ಹಿನ್ನೆಲೆಯಲ್ಲಿ ಆರೋಪಿ ವೈದ್ಯನನ್ನು ಬಂಧಿಸಲಾಗಿದೆ.

ಗ್ವಾಲಿಯರ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿಯೇ ಇಬ್ಬರು ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಸಹೋದ್ಯೋಗಿ ಮಹಿಳಾ ವೈದ್ಯಯ ಮೇಲೆಯೇ ಆರೋಪಿ ಅತ್ಯಾಚಾರವೆಸಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button