ಕನ್ಯತ್ವ ಸಾಬೀತುಪಡಿಸಲು ವಿಫಲವಾಗಿದ್ದಕ್ಕೆ ನವ ವಿವಾಹಿತೆ ಮೇಲೆ ದೌರ್ಜನ್ಯ; ಮಾವನಿಗೆ ಬಿತ್ತು 10 ಲಕ್ಷ ರೂ. ದಂಡ!
ಪ್ರಗತಿವಾಹಿನಿ ಸುದ್ದಿ, ಭಿಲ್ವಾರಾ: ಬಲವಂತದ ಕನ್ಯತ್ವ ಪರೀಕ್ಷೆಯಲ್ಲಿ ತನ್ನ ಕನ್ಯತ್ವ ಸಾಬೀತುಪಡಿಸಲು ವಿಫಲವಾದ ನವವಿವಾಹಿತೆಗೆ ಚಿತ್ರಹಿಂಸೆ ನೀಡಿದ ಮಾವನಿಗೆ 10 ಲಕ್ಷ ರೂ. ದಂಡ ಬಿದ್ದಿದೆ.
ಈ ಘಟನೆ ನಡೆದಿರುವುದು ರಾಜಸ್ಥಾನದ ಭಿಲ್ವಾರಾದಲ್ಲಿ. ಸಾನ್ಸಿ ಬುಡಕಟ್ಟಿಗೆ ಸೇರಿದ 24 ವರ್ಷದ ಯುವತಿ ಕಳೆದ ಮೇ 11ರಂದು ವಿವಾಹವಾಗಿದ್ದಳು. ಆಕೆಗೆ ವಿವಾಹದ ದಿನ ಯುವತಿಯನ್ನು ಬಲವಂತದಿಂದ ಕನ್ಯತ್ವ ಪರೀಕ್ಷೆಗೆ ಗುರಿಪಡಿಸಲಾಗಿತ್ತು.
ಆದರೆ ಈ ಪರೀಕ್ಷೆಯಲ್ಲಿ ಯುವತಿ ಕನ್ಯತ್ವ ಸಾಬೀತುಪಡಿಸಲು ವಿಫಲಳಾದಳು. ಈಕೆಗೆ “ಶುದ್ಧೀಕರಣ” ಆಚರಣೆ ಅಥವಾ ಕುಕಾಡಿ ಪ್ರಾಥವನ್ನು ನಡೆಸುವಂತೆ ಒತ್ತಾಯಿಸಲಾಯಿತು ಎನ್ನಲಾಗಿದೆ. ಸಿಟ್ಟಿಗೆದ್ದ ಯುವತಿಯ ಅತ್ತೆ, ಮಾವ ಹಾಗೂ ಪತಿ ಸೇರಿ ಆಕೆಯನ್ನು ಥಳಿಸಿದ್ದಾರೆ.
ಇದರ ಬೆನ್ನಿಗೇ ಖಾಪ್ ಪಂಚಾಯಿತಿ ಮೇ 31ರಂದು ಸ್ಥಳೀಯ ದೇವಸ್ಥಾನದಲ್ಲಿ ಸಭೆ ಸೇರಿ ಮಹಿಳೆಯ ಮಾವನಿಗೆ 10 ಲಕ್ಷ ರೂ. ದಂಡ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮದುವೆಗೂ ಮುನ್ನ ಆಕೆಯ ನೆರೆಹೊರೆಯವರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದರು ಎಂದು ಆರೋಪಿಸಲಾಗಿದ್ದು, ಆಕೆ ಸುಭಾಷ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದರಿಂದಾಗಿ ಆಕೆ ಕನ್ಯತ್ವ ಪರೀಕ್ಷೆಯಲ್ಲಿ ತನ್ನ ಕನ್ಯತ್ವ ಸಾಬೀತುಪಡಿಸಲು ವಿಫಲವಾಗಿದ್ದಳು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸುರೇಂದ್ರ ಕುಮಾರ್ ತಿಳಿಸಿದ್ದಾರೆ.
ಜಿಮ್ ನಲ್ಲಿ ತಲೆಕೆಳಗಾಗಿ ಸಿಲುಕಿದ ಮಹಿಳೆ; ಸ್ಮಾರ್ಟ್ ವಾಚ್ ಬಳಸಿ ಪಾರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ