Latest

ವಿಶ್ವದ ಅತ್ಯಂತ ದುಬಾರಿ ಒಂಟೆ ; ಬೆಲೆ ಕೇಳಿ ನಿಬ್ಬೆರಗಾದ ಜನ!

ಪ್ರಗತಿವಾಹಿನಿ ಸುದ್ದಿ; ಸೌದಿ ಅರೇಬಿಯಾದಿಂದ ಪ್ರಾಣಿಯೊಂದರ ಬೆಲೆ‌ ಅಚ್ಚರಿ ಮೂಡಿಸಿದೆ.‌ ಸೌದಿ ಅರೇಬಿಯಾ ಒಂಟೆ ಬಹಳ‌ ಪ್ರಸಿದ್ಧಿ ಪ್ರಾಣಿ. ‌ಕರ್ನಾಟಕದ ಜನರಿಗೂ ಒಂಟೆ ಎಂದರೆ ಪ್ರೀತಿ. ‌ಹಾಗಾಗಿ ಹಲವರು ಒಂಟೆ ರೈಡ್ ಮಾಡಲು ಇಷ್ಟಪಡುತ್ತಾರೆ. ಆದರೆ ಸೌದಿ ಅರೇಬಿಯಾದಲ್ಲಿರುವ ಒಂದು ಒಂಟೆ ವಿಶ್ವದ ಅತ್ಯಂತ ದುಬಾರಿ ಒಂಟೆ ಎಂದು ಹೇಳಲಾಗುತ್ತದೆ. ಬೆಲೆ‌‌ ಕೇಳಿ ಜನ ನಿಬ್ಬೆರಗಾಗಿದ್ದಾರೆ.

ಸೌದಿ ಅರೇಬಿಯಾದಲ್ಲಿ ಈ ಒಂಟೆಗೆ ಸಾರ್ವಜನಿಕ ಹರಾಜು ಆಯೋಜಿಸಲಾಗಿತ್ತು. ಒಂಟೆಯ ಆರಂಭಿಕ ಬಿಡ್ ಅನ್ನು 5 ಮಿಲಿಯನ್ ಸೌದಿ ರಿಯಾಲ್ ಅಂದರೆ ಸುಮಾರು 10 ಕೋಟಿ 16 ಲಕ್ಷ ರೂಪಾಯಿ ಆಗಿದೆ. ಬಳಿಕ 7 ಮಿಲಿಯನ್ ಸೌದಿ ರಿಯಾಲ್‌ಗೆ ಬಿಡ್ ಅಂತಿಮಗೊಳಿಸಲಾಗಿದೆ.

ಈ ಒಂಟೆ ತನ್ನ ವಿಶೇಷ ಸೌಂದರ್ಯ ಮತ್ತು ಅನನ್ಯತೆಗೆ ವಿಶ್ವಾದ್ಯಂತ ಖ್ಯಾತಿ ಪಡೆದಿದೆ. ಪ್ರಪಂಚದಲ್ಲಿ ಈ ಜಾತಿಯ ಒಂಟೆಗಳು ಬಹಳ ಕಡಿಮೆ. ಒಂಟೆಗೆ 7 ಮಿಲಿಯನ್ ಸೌದಿ ರಿಯಾಲ್ ಅಂದರೆ ಸುಮಾರು 14 ಕೋಟಿ 23 ಲಕ್ಷ ರೂಪಾಯಿ ಬಿಡ್ ಮಾಡಲಾಗಿದೆ.‌ ಇಷ್ಟು ಹೆಚ್ಚು ಬಿಡ್ ಮಾಡಿ ಒಂಟೆ ಖರೀದಿಸಿದವರು ಯಾರು ಎಂಬುದು ಬಹಿರಂಗವಾಗಿಲ್ಲ.

 

Home add -Advt

Related Articles

Back to top button