ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಳೆದ ಎರಡು ಮೂರು ದಿನಗಳಿಂದ ದೇಶದಲ್ಲಿ ಚಿನ್ನಾಭರಣ ಬೆಲೆಯಲ್ಲಿ ಸತತ ಇಳಿಕೆಯಾಗುತ್ತಿರುವುದು ಆಭರಣ ಪ್ರಿಯರರಿಗೆ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಕೂಡ ಇದು ಸಕಾಲ ಎನ್ನಬಹುದು.
ಭಾರತದಲ್ಲಿ 10 ಗ್ರಾಂ ಚಿನ್ನಕ್ಕೆ 210 ರೂ. ಕುಸಿತವಾಗಿದ್ದು, ಬೆಳ್ಳಿಯ ಬೆಲೆಯಲ್ಲಿ ಕೂಡ ಕೆಜಿಗೆ ಬರೋಬ್ಬರಿ 400 ರೂ. ಇಳಿಕೆ ಕಂಡಿದೆ. ಮಹಾನಗರಗಳಲ್ಲಿ ಚಿನ್ನ ಬೆಳ್ಳಿ ದರ ಇಂದು ಎಷ್ಟಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 47,750 ರೂಪಾಯಿ ನಿಗದಿಯಾಗಿದೆ. 24 ಕ್ಯಾರೆಟ್ ಚಿನ್ನ 52,100 ರೂಪಾಯಿ ಇದೆ.
ಇನ್ನು ಹಲವು ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ದರ ಚೆನ್ನೈ- 47,930 ರೂ. ಮುಂಬೈ- 47,750 ರೂ, ದೆಹಲಿ- 47,750 ರೂ, ಕೊಲ್ಕತ್ತಾ- 47,750 ರೂ, ಹೈದರಾಬಾದ್- 47,750 ರೂ, ಕೇರಳ- 47,750 ರೂ, ಪುಣೆ- 48,820 ರೂ ಇದೆ.
24 ಕ್ಯಾರೆಟ್ ಚಿನ್ನ ಚೆನ್ನೈ- 52,290 ರೂ, ಮುಂಬೈ- 52,100 ರೂ, ದೆಹಲಿ- 52,100 ರೂ, ಕೊಲ್ಕತ್ತಾ- 52,100 ರೂ, ಹೈದರಾಬಾದ್- 52,100 ರೂ, ಪುಣೆ- 52,170 ರೂ, ನಿಗದಿಯಾಗಿದೆ.
ಬೆಳ್ಳಿ ದರದಲ್ಲಿಯೂ ಕುಸಿತಕಂಡಿದ್ದು, ಬೆಂಗಳೂರಿನಲ್ಲಿ ಕೆಜಿ ಬೆಳ್ಳಿಗೆ 72,100 ರೂ ನಿಗದಿಯಾಗಿದೆ. ದೆಹಲಿಯಲ್ಲಿ 68,000 ರೂ, ಹೈದರಾಬಾದ್- 72,100 ರೂ ದಾಖಲಾಗಿದೆ.
ವಿಶ್ವದ ಅತ್ಯಂತ ದುಬಾರಿ ಒಂಟೆ ; ಬೆಲೆ ಕೇಳಿ ನಿಬ್ಬೆರಗಾದ ಜನ!
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ