CrimeKannada NewsLatestNational

*6 ವರ್ಷದ ಬಾಲಕಿ ಮೇಲೆ 9 ನೇ ತರಗತಿ ವಿದ್ಯಾರ್ಥಿಯಿಂದ ಅತ್ಯಾಚಾರ*

ಪ್ರಗತಿವಾಹಿನಿ ಸುದ್ದಿ: ಹೂವುಗಳನ್ನು ತೋರಿಸುವ ನೆಪದಲ್ಲಿ 6 ವರ್ಷದ ಬಾಲಕಿಯನ್ನು ಮನೆಗೆ ಕರೆದೊಯ್ದು 9ನೇ ತರಗತಿ ವಿದ್ಯಾರ್ಥಿ ಅತ್ಯಾಚಾರವೆಸಗಿರುವ ಘಟನೆ ಬೆಳಕಿಗೆ ಬಂದಿದೆ.

ತ್ರಿಪುರಾದ ಖೋವಾಯ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬಾಲಕಿ ತನ್ನ ಅಕ್ಕನೊಂದಿಗೆ ಮನೆಯಲ್ಲಿದ್ದಳು. ಆಕೆಯ ಪೋಷಕರು ಹುಲ್ಲು ತರಲು ಹೋಗಿದ್ದ ವೇಳೆ ನೆರೆಮನೆಯ ಬಾಲಕ ಬಂದು ಬಾಲಕಿಯನ್ನು ಹೂವುಗಳನ್ನು ತೋರಿಸುವುದಾಗಿ ಹೇಳಿ ಕರೆದೊಯ್ದಿದ್ದಾನೆ. ತನ್ನ ಮನೆಗೆ ಕರೆದೊಯ್ದು ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ.

ಬಾಲಕಿ ತನ್ನ ಪೋಷಕರಿಗೆ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾಳೆ. ಬಾಲಕಿ ತಂದೆ ಬಾಲಕನ ಮನೆಯವರನ್ನು ಕರೆದು ಅತ್ಯಾಚಾರ ನಡೆಸಿರುವ ಬಗ್ಗೆ ತಿಳಿಸಿದ್ದಾರೆ. ಈ ವೇಳೆ ಆತನ ಪೋಷಕರು ತಮ್ಮ ಮಗನನ್ನು ಕ್ಷಮಿಸಿ ಬಿಡಿ, ಈ ವಿಷಯ ಇಲ್ಲಿಗೆ ಬಿಡಿ ಪೋಷರಿಗೆ ದೂರು ನೀಡದಂತೆ ಕೇಳಿಕೊಂಡಿದ್ದಾರೆ.

ವಿಷಯ ಸ್ಥಳೀಯರಿಗೆ ಗೊತ್ತಾಗುತ್ತಿದ್ದಂತೆ ಬಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Related Articles

Back to top button