ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶನಿವಾರ ರಾತ್ರಿ ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ್ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಹಣಕಾಸಿನ ವ್ಯವಹಾರವೇ ಈ ಪ್ರಕರಣಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಪತ್ರಕರ್ತರಿಗೆ ಪ್ರಕರಣದ ಕುರಿತು ಮಾಹಿತಿ ನೀಡಿದರು.
20, 07-01-2023 ರಂದು ಸಾಯಂಕಾಲ ಸುಮಾರು 7 ರಿಂದ 07.30 ಗಂಟೆಗೆ ಹಿಂದೂ ಸಂಘಟನೆಯ ಜಿಲ್ಲಾ ಮುಖಂಡರಾದ ರವಿ ಕೋಕಿತಕರ ಇವರಿಗೆ ಹಿಂಡಲಗಾದಲ್ಲಿರುವ ತಮ್ಮ ಮನೆಗೆ ಚಾಲಕ ಮತ್ತು ಸ್ನೇಹಿತರು ಸೇರಿ ಸ್ಥಾರ್ಪಿಯೋ ವಾಹನದಲ್ಲಿ ಹೊರಟಾಗ ಯಾರೋ 03 ಜನ ಆರೋಪಿತರು ಮೋಟರ್ ಸೈಕಲ್ ಮೇಲೆ ಬಂದು ಮಾರ್ಗ ಮಧ್ಯದಲ್ಲಿ ಪಿಸ್ತೂಲ್ ನಿಂದ ಗುಂಡು ಹಾರಿಸಿದ್ದು, ರವಿ ಕೋಕೀತಕರ ರವರ ಗಡ್ಡಕ್ಕೆ ಗುಂಡು ತಗುಲಿ ರಕ್ತಗಾಯವಾಗಿದೆ.
ಅದೇ ಗುಂಡು ವಾಹನ ಚಲಾಯಿಸುತ್ತಿದ್ದ, ಚಾಲಕನ ಕೈಗೆ ತಗುಲಿದೆ. ಈ ಹಿನ್ನೆಲೆಯಲ್ಲ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ರವಿ ಲೋಕಿತಕರ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಈ ಪ್ರಕರಣವನ್ನು ಭೇಧಿಸಲು ಡಿಸಿಪಿ (ಕಾ&ಸು ) ರವೀಂದ್ರ ಗಡಾದಿ ನೇತೃತ್ವದಲ್ಲಿ 04 ತಂಡಗಳನ್ನು ರಚಿಸಿ, ಅಧಿಕಾರಿಗಳ ತಂಡವು ತೀವ್ರ ತನಿಖೆ ಕೈಗೊಂಡಿದೆ.
ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ.
1) ಅಭೀಜೀತ ಸೋಮನಾಥ ಬಾತಖಾಂಡ (41) ಸಾ|| ಪಾಟೀಲ ಮಾಳ, ಬೆಳಗಾವಿ
2) ರಾಹುಲ ನಿಂಗಾಣಿ ಕೋಡಚವಾಡ (32) ಸಾ ಸಂಬಾಜಿ ಗಲ್ಲಿ, ಬಸ್ತವಾಡ
3) ಜ್ಯೋತಿಭಾ ಗಂಗಾರಾಮ ಮುತಗೇತಕರ (25) ಸಾ ಸಂಬಾಜಿ ಗಲ್ಲ ಬಸ್ತವಾಡ ಇವರನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ಗಾಯಾಳು ರವಿ ಕೋಕಿತಕರ ಹಾಗೂ ಅಭಿಜೀತ ಭಾತಖಾಂಡ ಇವರ ಮಧ್ಯದಲ್ಲಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ವೈಷ್ಯಮ್ಯವೇ ಕಾರಣ ಎಂದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
https://pragati.taskdun.com/raid-on-ravi-kakatkar-4-team-formation-boralingaiah-informed-about-the-incident-pramod-mutalikas-response/
https://pragati.taskdun.com/firing-on-shreeram-sene-leader/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ