BusinessKannada NewsLatest

*ಠೇವಣಿ ಬಡ್ಡಿದರ ಪರಿಷ್ಕರಣೆ*: *ಯಾವ ಬ್ಯಾಂಕ್ ನಲ್ಲಿ ಎಷ್ಟಿದೆ ಬಡ್ಡಿದರ?*: *ಇಲ್ಲಿದೆ ಮಾಹಿತಿ*

ಪ್ರಗತಿವಾಹಿನಿ ಸುದ್ದಿ: ಭಾರತೀಯ ರಿಸರ್ವ್​ ಬ್ಯಾಂಕ್ (RBI) ರೆಪೊ ದರವನ್ನು ಹೆಚ್ಚಿಸಿದ ನಂತರ, ಹಲವಾರು ಬ್ಯಾಂಕುಗಳು ತಮ್ಮ ಸ್ಥಿರ ಠೇವಣಿ ಅಥವಾ ಎಫ್ ಡಿ ಬಡ್ಡಿ ದರಗಳನ್ನು ಏರಿಕೆ ಮಾಡಿವೆ.

ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ನಿರ್ದಿಷ್ಟ ಅವಧಿಯ FD ಯೋಜನೆಗಳ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸಿರುವ ಬ್ಯಾಂಕುಗಳಲ್ಲಿ HDFC ಬ್ಯಾಂಕ್, ಕೆನರಾ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಇಂಡಿಯನ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಸೇರಿವೆ.

ಭಾರತದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಆಗಿರುವ HDFC ಬ್ಯಾಂಕ್, ಕೆಲವು ನಿರ್ದಿಷ್ಟ ಅವಧಿಯ FD ಯೋಜನೆಗಳ ಮೇಲಿನ ಬಡ್ಡಿ ದರವನ್ನು 50 ಬೇಸಿಸ್ ಪಾಯಿಂಟ್‌ಗಳವರೆಗೆ ಹೆಚ್ಚಿಸಿದೆ. ಈ ಹೊಸ ದರಗಳು ನವೆಂಬರ್ 4, 2026 ರಿಂದ ಜಾರಿಗೆ ಬಂದಿವೆ.

ಬ್ಯಾಂಕ್, 61 ದಿನಗಳಿಂದ ಆರು ತಿಂಗಳ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹಿಂದಿನ ಶೇ 4.25 ರಿಂದ ಶೇ 4.75 ಕ್ಕೆ ಏರಿಸಿದೆ. 3 ವರ್ಷ ಮತ್ತು 1 ದಿನದಿಂದ 10 ವರ್ಷಗಳವರೆಗಿನ ಅವಧಿಯನ್ನು ಆಯ್ಕೆ ಮಾಡುವ ಠೇವಣಿದಾರರು ತಮ್ಮ ಹೂಡಿಕೆಗಳ ಮೇಲೆ ಗರಿಷ್ಠ ಶೇ 6.60 ರಷ್ಟು ಬಡ್ಡಿಯನ್ನು ಪಡೆಯಲಿದ್ದಾರೆ.

HDFC ಬ್ಯಾಂಕ್​​​ನ ಬಡ್ಡಿದರದ ಪಟ್ಟಿ:

ಅವಧಿ ಬಡ್ಡಿದರ (per annum) ಹಿರಿಯ ನಾಗರಿಕರ ಬಡ್ಡಿದರ (per annum)
7 – 14 ದಿನಗಳು 2.75% 3.25%
15-29 ದಿನಗಳು 2.75% 3.25%
30-45 ದಿನಗಳು 3.25% 3.75%
46-60 ದಿನಗಳು 4.25% 4.75%
61-89 ದಿನಗಳು 4.75% 5.25%
90 ದಿನಗಳು <= 6 ತಿಂಗಳು 4.75% 5.25%
6 ತಿಂಗಳು 1ದಿನ <=9 ತಿಂಗಳು 5.65% 6.15%
9 ತಿಂಗಳು 1 ದಿನ ದಿಂದ < 1 ವರ್ಷ 5.90% 6.40%
1 ವರ್ಷ to < 15 ತಿಂಗಳು 6.25% 6.75%
15 ತಿಂಗಳು to < 18 ತಿಂಗಳು 6.35% 6.85%
18 ತಿಂಗಳು to < 21 ತಿಂಗಳು 6.50% 7.00%
21 ತಿಂಗಳು to 2 ವರ್ಷ 6.50% 7.00%
2 ವರ್ಷ1 ದಿನ to < 2 ವರ್ಷ 11 ತಿಂಗಳು 6.55% 7.05%
2 ವರ್ಷ 11 ತಿಂಗಳು (35 ತಿಂಗಳು) 6.55% 7.05%
2 ವರ್ಷ 11 ತಿಂಗಳು 1 ದಿನ <= 3 ವರ್ಷ 6.55% 7.05%
3 ವರ್ಷ 1 ದಿನ to < 4 ವರ್ಷ 7 ತಿಂಗಳು 6.60% 7.20%
4 ವರ್ಷ 7 ತಿಂಗಳು (55 ತಿಂಗಳು) 6.60% 7.20%
4 ವರ್ಷ 7 ತಿಂಗಳು 1 ದಿನ <=5 ವರ್ಷ 6.60% 7.20%
5 ವರ್ಷ 1 ದಿನ to 10 ವರ್ಷ 6.60% 7.10%


ನವೆಂಬರ್ 11, 2026 ರಿಂದ, ಬ್ಯಾಂಕ್ ಆಫ್ ಬರೋಡಾ ತನ್ನ ‘ಗೋಲ್ಡನ್​ ಗೋಲ್​ ಠೇವಣಿ ಯೋಜನೆ’ಯ (Golden Goal Deposit Scheme) ಮೇಲೆ ಶೇ 6.85ರಷ್ಟು ಬಡ್ಡಿ ದರವನ್ನು ನೀಡುತ್ತಿದೆ. ಈ ಹಿಂದೆ ಇದು ಶೇ 6.75 ಆಗಿತ್ತು. ಗಮನಾರ್ಹ ಸಂಗತಿಯೆಂದರೆ, ಹಿರಿಯ ನಾಗರಿಕರು ಶೇ 7.35ರಷ್ಟು ಬಡ್ಡಿಯನ್ನು ಪಡೆಯಲು ಅರ್ಹರಾಗಿದ್ದರೆ, ಸೂಪರ್ ಹಿರಿಯ ನಾಗರಿಕರು (ಅತಿ ಹಿರಿಯ ನಾಗರಿಕರು) ತಮ್ಮ ಠೇವಣಿಗಳ ಮೇಲೆ ಶೇ 7.45ರಷ್ಟು ಬಡ್ಡಿಯನ್ನು ಪಡೆಯಲಿದ್ದಾರೆ.

ಕೆನರಾ ಬ್ಯಾಂಕ್ ಕೂಡ ನವೆಂಬರ್ 2026 ರಲ್ಲಿ ತನ್ನ ಕೆಲವು FD ಯೋಜನೆಗಳ ಮೇಲಿನ ಬಡ್ಡಿ ದರಗಳನ್ನು ಪರಿಷ್ಕರಿಸಿದೆ. ಬ್ಯಾಂಕ್ ತನ್ನ 555 ದಿನಗಳ FD ಯೋಜನೆಯ ಮೇಲಿನ ಬಡ್ಡಿ ದರವನ್ನು ಹಿಂದಿನ ಶೇ. 6.60 ರಿಂದ ಶೇ 6.75 ಕ್ಕೆ ಹೆಚ್ಚಿಸಿದೆ. ಹಿರಿಯ ನಾಗರಿಕರು ಈ ಯೋಜನೆಯಲ್ಲಿ ಶೇ 7.25ರಷ್ಟು ಬಡ್ಡಿಯನ್ನು ಪಡೆಯಲು ಅರ್ಹರಾಗಿರುತ್ತಾರೆ.

ನವೆಂಬರ್ 10, 2026 ರಿಂದ ಜಾರಿಗೆ ಬರುವಂತೆ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ತನ್ನ 444 ದಿನಗಳ ವಿಶೇಷ ಠೇವಣಿ ಯೋಜನೆಯ ಮೇಲಿನ ಬಡ್ಡಿ ದರವನ್ನು ಶೇ 6.60 ರಿಂದ ಶೇ 6.75 ಕ್ಕೆ ಏರಿಸಿದೆ. ಇಂಡಿಯನ್ ಬ್ಯಾಂಕ್, ಅಕ್ಟೋಬರ್ 23, 2026 ರಿಂದ ಜಾರಿಗೆ ಬರುವಂತೆ ತನ್ನ 555 ದಿನಗಳ ಠೇವಣಿ ಯೋಜನೆಯ ಮೇಲೆ ಶೇಕಡಾ 6.80 ರಷ್ಟು ಬಡ್ಡಿ ದರವನ್ನು ನೀಡುತ್ತಿದೆ. 777 ದಿನಗಳ ಸ್ಥಿರ ಠೇವಣಿ (FD) ಯೋಜನೆಯನ್ನು ಆಯ್ಕೆ ಮಾಡುವ ಠೇವಣಿದಾರರು ಶೇಕಡಾ 6.80 ರಷ್ಟು ಆದಾಯವನ್ನು ಪಡೆಯಲು ಅರ್ಹರಾಗಿರುತ್ತಾರೆ.

ಬ್ಯಾಂಕ್ ಆಫ್ ಇಂಡಿಯಾ, ನವೆಂಬರ್ 2, 2026 ರಿಂದ ತನ್ನ ‘BOI ಅಕ್ಷಯ ಠೇವಣಿ’ (500 ದಿನಗಳ ಯೋಜನೆ) ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸಿದೆ. ಈ ಯೋಜನೆಯಡಿ ಸಾಮಾನ್ಯ ಗ್ರಾಹಕರಿಗೆ ಶೇಕಡಾ 6.85, ಹಿರಿಯ ನಾಗರಿಕರಿಗೆ ಶೇಕಡಾ 7.35 ಮತ್ತು ಅತಿ ಹಿರಿಯ ನಾಗರಿಕರಿಗೆ (ಸೂಪರ್ ಸೀನಿಯರ್ ಸಿಟಿಜನ್ಸ್) ಶೇಕಡಾ 7.50 ರಷ್ಟು ಬಡ್ಡಿ ದರವನ್ನು ನೀಡಲಾಗುತ್ತಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ತನ್ನ 444 ದಿನಗಳ ಠೇವಣಿ ಯೋಜನೆಯ ಮೇಲೆ ಶೇಕಡಾ 6.70 ಮತ್ತು 680 ದಿನಗಳ ಠೇವಣಿ ಯೋಜನೆಯ ಮೇಲೆ ಶೇಕಡಾ 6.80 ರಷ್ಟು ಬಡ್ಡಿ ದರವನ್ನು ನೀಡುತ್ತಿದೆ. ಪರಿಷ್ಕೃತ ದರಗಳು ನವೆಂಬರ್ 5, 2026 ರಿಂದ ಜಾರಿಗೆ ಬಂದಿವೆ.


Related Articles

Back to top button