
ಪ್ರಗತಿವಾಹಿನಿ ಸುದ್ದಿ :ಐಪಿಎಲ್ 18 ನೇ ಆವೃತ್ತಿ ಆರಂಭಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು, ಮೊದಲ ಪಂದ್ಯದಲ್ಲೇ ಆರ್‌ಸಿಬಿ ಕೊಲ್ಕತ್ತಾ ವಿರುದ್ಧ ಸೆಣೆಸಾಡಲಿದೆ. ಪಂದ್ಯಕ್ಕೂ ಮುನ್ನ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರುನ ಅನ್‌ಬಾಕ್ಸ್ ಈವೆಂಟ್ ನಡೆಯಲಿದೆ.
ಫ್ರಾಂಚೈಸಿಯ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ಭೇಟಿ ಮಾಡುವ ಅವಕಾಶವನ್ನು ನೀಡುತ್ತದೆ. ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಜರಿರುವ ಅಭಿಮಾನಿಗಳಿಗೆ ತಮ್ಮ ತಂಡವನ್ನು ಪರಿಚಯಿಸಲಿದ್ದಾರೆ. 2024ರಲ್ಲಿ ವಿರಾಟ್ ಕೊಹ್ಲಿ ಹೊಸ ಅಧ್ಯಾಯ ಎಂದು ಘೋಷಣೆ ನೀಡಿದ್ದರು.
ಐಪಿಎಲ್ 2025ರ ಋತುವಿನಲ್ಲಿ ರಜತ್ ಪಾಟಿದಾರ್ ನಾಯಕತ್ವದ ಬಗ್ಗೆ ಮತ್ತು ಅವರ ಗುರಿಗಳ ಬಗ್ಗೆ ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್ 2025 ಸೂಕ್ತ ವೇದಿಕೆಯಾಗಲಿದೆ.