ನವದೆಹಲಿಗೆ ಹೊರಟ ಅತೃಪ್ತ ಶಾಸಕರು
ಪ್ರಗತಿವಾಹಿನಿ ಸುದ್ದಿ, ಮುಂಬೈ-
ಕಳೆದ 17 ದಿನಗಳಿಂದ ಮುಂಬೈನಲ್ಲಿ ವಾಸ್ತವ್ಯ ಮಾಡಿದ್ದ ಬಂಡಾಯ ಶಾಸಕರು ಇದೀಗ ದೆಹಲಿಯತ್ತ ಪ್ರಯಾಣಿಸಿದ್ದಾರೆ.
ವಿಶೇಷ ವಿಮಾನದಲ್ಲಿ ನವದೆಹಲಿಗೆ ತೆರಳಿರುವ ಶಾಸಕರು, ಸುಪ್ರಿಂ ಕೋರ್ಟ್ ವಕೀಲರೊಂದಿಗೆ ಚರ್ಚೆ ನಡೆಸಲಿದ್ದಾರೆ. ಸಂಜೆ ಅಲ್ಲಿಂದ ಮುಂಬೈಗೇ ವಾಪಸ್ ಬರಲಿದ್ದಾರೋ ಅಥವಾ ಇನ್ನೆಲ್ಲಿಗಾದರೂ ತೆರಳಲಿದ್ದಾರೋ ಎನ್ನುವುದು ಕಾದು ನೋಡಬೇಕಿದೆ. ಏಕೆಂದರೆ ವಿಶೇಷ ವಿಮಾನವನ್ನು ಸಜೆಯವರೆಗೂ ಅಲ್ಲಿಯೇ ಉಳಿಸಿಕೊಳ್ಳಲಿದ್ದಾರೆ.
ಸಂಜೆಯವರೆಗೆ ವಿಧಾನಸೌಧದಲ್ಲಿನ ಬೆಳವಣಿಗೆಯನ್ನು ಗಮನಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲು ಶಾಸಕರು ನಿರ್ಧರಿಸಿದ್ದಾರೆ. ಜೊತೆಗೆ ಸುಪ್ರಿಂ ಕೋರ್ಟ್ ವಕೀಲರಿಂದಲೂ ಸಲಹೆ ಪಡೆಯಲಿದ್ದಾರೆ.
ಈ ಮಧ್ಯೆ ಮುಂಬೈ ಹೊಟೆಲ್ ಮುಂದೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ.
ಈ ಮಧ್ಯೆ ಬೆಂಗಳೂರಿನಲ್ಲಿ ವಿಧಾನಸಭೆಯ ಅಧಿವೇಶನ ನಡೆಯುತ್ತಿದ್ದು, ಮೈತ್ರಿ ಪಕ್ಷಗಳ ಯಾವು ಮುಖಂಡರೂ ಸದನದತ್ತ ಮುಖಮಾಡಿಲ್ಲ. ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಮುಖಂಡರು ಸೇರಿ ಇಂದೂ ಕೂಡ ವಿಶ್ವಾಸಮತ ಯಾಚನೆ ತಪ್ಪಿಸಿಕೊಳ್ಳಲು ಮಾಡಬೇಕಾದ ತಂತ್ರಗಳ ಕುರಿತು ಚರ್ಚಿಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ