Latest

ದುಬೈ ಲಾಟರಿಯಲ್ಲಿ 24 ಕೋಟಿ ಗೆದ್ದ ಶಿವಮೊಗ್ಗದ ವ್ಯಕ್ತಿ

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಅದೃಷ್ಟ ಎನ್ನುವುದು ಯಾವಾಗ ಯಾರಿಗೆ ಬೇಕಾದರೂ ಒಲಿಯಬಹುದು ಎಂಬುದಕ್ಕೆ ಈ ಘಟನೆ ಉದಾಹರಣೆ. ದುಬೈನ ರಾಫೆಲ್ ಲಾಟರಿಯಲ್ಲಿ ಬರೋಬ್ಬರಿ 24 ಕೋಟಿ ರೂಪಾಯಿಗಳನ್ನು ಶಿವಮೊಗ್ಗದ ವ್ಯಕ್ತಿಯೊಬ್ಬರು ಗೆದ್ದಿದ್ದಾರೆ.

ಶಿವಮೊಗ್ಗ ಮೂಲದ ಶಿವಮೂರ್ತಿ ಕೃಷ್ಣಪ್ಪ ಬಂಪರ್ ಲಾಟರಿ ಗೆದ್ದ ವ್ಯಕ್ತಿ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿದ್ದ ಶಿವಮೂರ್ತಿ ಕೆಲಸಕ್ಕಾಗಿ ದುಬೈಗೆ ತೆರಳಿದ್ದರು. ಕಳೆದ 15 ವರ್ಷಗಳಿಂದ ದುಬೈನಲ್ಲಿ ಕೆಲಸ ಮಾಡುತ್ತಿದ್ದರು. ಇದೇ ವೇಳೆ ಪ್ರತಿ ತಿಂಗಳು ರಾಫೆಲ್ ಲಾಟರಿ ಖರೀದಿಸುತ್ತಿದ್ದರು. ಹಲವು ವರ್ಷಗಳಿಂದ ಲಾಟರಿ ಖರೀದಿಸಿದ್ದರೂ ಲಾಟರಿ ಗೆಲ್ಲದಿದ್ದಾಗ ತುಂಬಾ ಬೇಸರಗೊಂಡಿದ್ದರು. ಆದರೂ ಲಾಟರಿ ಖರೀದಿ ನಿಲ್ಲಿಸಿರಲಿಲ್ಲ.

ಇದೀಗ ಶಿವಮೂರ್ತಿಯವರ ಸಹನೆಗೆ ಪ್ರತಿಫಲವಾಗಿ ಕೊನೆಗೂ ಬರೋಬ್ಬರಿ 24 ಕೋಟಿ ರೂಪಾಯಿ ಬಂಪರ್ ಲಾಟರಿ ಗೆದ್ದಿದ್ದಾರೆ. ಇನ್ನು ಟಿಕೆಟ್ ಫಲಿತಾಂಶವನ್ನು ಲೈವ್ ನಲ್ಲಿ ನೋಡುತ್ತಿದ್ದ ಇವರಿಗೆ ಏಕಾಏಕಿ ತನ್ನ ಟಿಕೆಟ್ ನಂಬರ್ ಗೆ 24 ಕೋಟಿ ಸಿಕ್ಕಿರುವುದು ಗೊತ್ತಾಗಿದೆ. ಘೋಷಣೆಯಾಗುತ್ತಿದಂತೆಯೇ ಆಯೋಜಕರಿಂದ ಕರೆ ಕೂಡ ಬಂದಿದ್ದು 24 ಕೋಟಿ ಗೆದ್ದಿರುವುದಾಗಿ ಖಚಿತಪಡಿಸಿದ್ದಾರೆ. ಇದೀಗ ಶಿವಮೂರ್ತಿ ಕೃಷ್ಣಪ್ಪ ಸಂತಸಕ್ಕೆ ಪಾರವೇ ಇಲ್ಲದಾಗಿದೆ.

Home add -Advt

Related Articles

Back to top button