
ಪ್ರಗತಿವಾಹಿನಿ ಸುದ್ದಿ : ವಿನೇಶ್ ಫೋಗಟ್ ಬೆಳ್ಳಿ ಪದಕ ಪಡೆಯುವ ಕನಸು ನುಚ್ಚುನೂರಾಗಿದೆ. ಸಿಎಎಸ್ ಅಂದರೆ ಕ್ರೀಡಾ ನ್ಯಾಯಮಂಡಳಿಗೆ ವಿನೇಶ್ ಫೋಗಟ್ ಸಲ್ಲಿಸಿದ್ದ ಮೇಲ್ಮನವಿ ವಜಾಗೊಂಡಿದೆ
100 ಗ್ರಾಂ ಅಧಿಕ ತೂಕ ಹೊಂದಿದ್ದಕ್ಕಾಗಿ ಒಲಿಂಪಿಕ್ಸ್ ಕ್ರೀಡಾಕೂಟದ ಮಹಿಳೆಯರ 50 ಕೆಜಿ ಫ್ರೀ-ಸ್ಟೈಲ್ ಫೈನಲ್‌ನಿಂದ ವಿನೇಶ್ ಅನರ್ಹರಾಗಿದ್ದರು. ನಂತರ ವಿನೇಶ್ ಫೋಗಟ್ ಕ್ರೀಡಾ ನ್ಯಾಯಮಂಡಳಿಯ ಮುಂದೆ ತಮಗೆ ಮೆಡಲ್ ನೀಡುವ ಕುರಿತಾಗಿ ಮೇಲ್ಮನವಿ ಸಲ್ಲಿಸಿದ್ದರು.
ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮಂಡಳಿ ಒಲಿಂಪಿಕ್ ಮುಗಿಯುವುದರೊಳಗಾಗಿ ತೀರ್ಪು ಪ್ರಕಟಿಸೋದಾಗಿ ಹೇಳಿತ್ತು. ಆನಂತರ ತೀರ್ಪಿನ ಗಡುವನ್ನು ಆಗಸ್ಟ್ 13ನೇ ತಾರೀಖಿವೆರೆಗೂ ವಿಸ್ತರಿಸಿತ್ತು. ಇಂದು ಪ್ರಕರಣದ ತೀರ್ಪು ಪ್ರಕಟಿಸಬೇಕಿದ್ದ ನ್ಯಾಯಮಂಡಳಿ ಮತ್ತೆ ಆಗಸ್ಟ್ 16ಕ್ಕೆ ದಿನಾಂಕ ನಿಗದಿಪಡಿಸಿ ತೀರ್ಪು ಮುಂದೂಡಿತ್ತು. ಆದರೆ ಇದೀಗ ಕ್ರೀಡಾ ನ್ಯಾಯ ಮಂಡಳಿ ವಿನೇಶ್ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ
ಸೆಮಿ ಫೈನಲ್‌ನಲ್ಲಿ ಗೆದ್ದು ಇನ್ನೇನು ಫೈನಲ್ ಆಡಬೇಕು ಎನ್ನುವಷ್ಟರಲ್ಲಿ ಅನರ್ಹಗೊಂಡಿದ್ದ ವಿನೇಶ್ ಫೋಗಟ್ ಬೆಳ್ಳಿ ಪದಕ ಪಡೆಯುತ್ತಾರಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಇದೀಗ ವಿನೇಶ್ ಬೆಳ್ಳಿ ಪದಕ ಪಡೆಯುವ ಕನಸು ಭಗ್ನವಾಗಿದೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ