Kannada NewsKarnataka NewsNationalPolitics

*ರಾಹುಲ್ ಗಾಂಧಿ ವಯನಾಡ್ ಭೇಟಿ ಮುಂದೂಡಿಕೆ*

ಪ್ರಗತಿವಾಹಿನಿ ಸುದ್ದಿ: ಕೇರಳದ ವಯನಾಡಿನಲ್ಲಿ ಭೀಕರ ಭೂಕುಸಿತ ಸಂಭವಿಸಿರುವ ಪ್ರದೇಶಗಳಿಗೆ ಕೇಂದ್ರ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಭೇಟಿ ನಿಗದಿಯಾಗಿತ್ತು. ಆದರೆ ತೀವ್ರ ಮಳೆ ಮತ್ತು ಹವಾಮಾನ ವೈಪರೀತ್ಯದ ಕಾರಣ ಈ ಭೇಟಿಯನ್ನು ಮುಂದೂಡಲಾಗಿದೆ.

ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಹವಾಮಾನ ವೈಪರೀತ್ಯ ಮತ್ತು ಸುರಿಯುತ್ತಿರುವ ಭಾರಿ ಮಳೆ ರಕ್ಷಣಾ ಕಾರ್ಯಾಚರಣೆಗೂ ತೊಡಕಾಗಿದೆ. ವಯನಾಡಿಗೆ ಕೇಂದ್ರವು ತಕ್ಷಣದ ಎಲ್ಲ ನೆರವನ್ನು ನೀಡುವಂತೆ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ನಿನ್ನೆ ಆಗ್ರಹಿಸಿದ್ದರು. ಅದೇ ರೀತಿ ಮುಂದಿನ ದಿನಗಳಲ್ಲಿ ಮತ್ತೆ ಆ ಗ್ರಾಮ ಮತ್ತು ಜನರ ಬದುಕನ್ನು ಕಟ್ಟಿಕೊಳ್ಳುವ ಯೋಜನೆಗಳನ್ನು ರೂಪಿಸಬೇಕಾದ ಅಗತ್ಯವನ್ನು ಸದನದಲ್ಲಿ ವಿವರಿಸಿದ್ದರು.

Home add -Advt

Related Articles

Back to top button